alex Certify
ಕನ್ನಡ ದುನಿಯಾ       Mobile App
       

Kannada Duniya

ಆನೆ ದಾಳಿಗೆ ಬಸ್ ನಲ್ಲಿದ್ದ ಚಾಲಕ ಕಕ್ಕಾಬಿಕ್ಕಿ

ಚೀನಾದ ಯುನ್ನಾನ್ ಎಂಬಲ್ಲಿ ಒಂದು ಬಸ್ ಮತ್ತು ಚಿಕ್ಕ ಟ್ರಕ್ ಮೇಲೆ ಆನೆಯೊಂದು ದಾಳಿ ಮಾಡಿದೆ. ತನ್ನ ಹಣೆಯಿಂದ್ಲೇ ಬಡಿದು ಬಸ್ ನ ಗಾಜನ್ನು ಪುಡಿಗಟ್ಟಿದೆ. ಈ ವೇಳೆ ಚಾಲಕ ಬಸ್ ನೊಳಗೆ ಸಿಕ್ಕಿಹಾಕಿಕೊಂಡಿದ್ದ. ಆದ್ರೆ ಅದೃಷ್ಟವಶಾತ್ ಪ್ರಯಾಣಿಕರು ಯಾರೂ ಇರಲಿಲ್ಲ.

ನಂತರ ಆನೆ, ಸಮೀಪದಲ್ಲೇ ಪಾರ್ಕ್ ಮಾಡಿದ್ದ ಲಾರಿ ಮೇಲೆ ತನ್ನ ಕೋಪವನ್ನು ತೀರಿಸಿಕೊಂಡಿದೆ. ಆನೆ ದಾಳಿಯಿಂದ ಎರಡೂ ವಾಹನಗಳು ಜಖಂಗೊಂಡಿವೆ. ಆದ್ರೆ ಯಾರಿಗೂ ಗಾಯಗಳಾಗಿಲ್ಲ. ಪ್ರತ್ಯಕ್ಷದರ್ಶಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಈ ದೃಶ್ಯವನ್ನು ರೆಕಾರ್ಡ್ ಮಾಡಿದ್ದಾರೆ.

ಮೊದಲು ಬಸ್ ಮೇಲೆ ಅಟ್ಯಾಕ್ ಮಾಡಿದ ಆನೆ, ನಂತರ ತನ್ನ ತಲೆಯಿಂದ್ಲೇ ದೂಡಿ ಬಸ್ ಅನ್ನು ಸ್ವಲ್ಪ ದೂರ ತಳ್ಳಿಕೊಂಡು ಹೋಗಿದೆ. ಚಾಲಕನ ಅದೃಷ್ಟ ನೆಟ್ಟಗಿತ್ತು, ಹಾಗಾಗಿ ಬಸ್ ಅನ್ನು ಕೆಳಕ್ಕೆ ತಳ್ಳಿ ದಾಂಧಲೆ ಮಾಡಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...