alex Certify
ಕನ್ನಡ ದುನಿಯಾ       Mobile App
       

Kannada Duniya

ಇದು ಗುಂಡಿಗೆ ಗಟ್ಟಿ ಇರುವವರಿಗೆ ಮಾತ್ರ..!

ಬೈಕ್ ಸ್ಟಂಟ್ ತುಂಬಾನೇ ಅಪಾಯಕಾರಿ. ಆ ಸಾಹಸಗಳನ್ನು ನೋಡಿದ್ರೇನೇ ಎದೆ ಝಲ್ಲೆನ್ನುತ್ತೆ. ಅಂಥದ್ರಲ್ಲಿ ನದಿಯ ಮಧ್ಯೆ ಮಾಡಿರೋ ಈ ಸ್ಟಂಟ್ ಅಂತೂ ಎಂಥವರನ್ನೂ ಬೆರಗಾಗಿಸೋದು ಸಹಜ. ಅಮೆರಿಕದ ಸ್ಟಂಟ್ ರೈಡರ್ ಟ್ರಾವಿಸ್ ಪಾಸ್ತ್ರಾನಾ ಮಾಡಿರೋ ಸಾಹಸ ಇದು.

ಲಂಡನ್ ನ ಥೇಮ್ಸ್ ನದಿಯಲ್ಲಿ ಈ ಸ್ಟಂಟ್ ಮಾಡಿದ್ದಾನೆ ಟ್ರಾವಿಸ್. ನದಿಯ ಎರಡೂ ಬಾರ್ಜ್ ಗಳ ಮಧ್ಯೆ 75 ಅಡಿ ಅಂತರವಿದೆ. ಮಧ್ಯೆ ಸೇತುವೆಯಿಲ್ಲ, ಬರೀ ನೀರು. ಬೈಕ್ ನಲ್ಲಿ ತಲೆಕೆಳಗಾಗಿ ಈ ತುದಿಯಿಂದ ಆ ತುದಿಗೆ ಟ್ರಾವಿಸ್ ಹಾರಿದ್ದಾನೆ.

ಈ ಮೂಲಕ ವಿಶ್ವದಾಖಲೆಗೂ ಟ್ರಾವಿಸ್ ಭಾಜನನಾಗಿದ್ದಾನೆ. ಕಳೆದ ಗುರುವಾರವೇ ಟ್ರಾವಿಸ್ ಈ ಸಾಹಸಕ್ಕೆ ಕೈಹಾಕಿದ್ದ. ಆದ್ರೆ ಭಾರೀ ಗಾಳಿ, ಮಳೆ ಇದ್ದಿದ್ರಿಂದ ಸ್ಟಂಟ್ ಅನ್ನು ಮುಂದೂಡಲಾಗಿತ್ತು. ನೂರಾರು ಮಂದಿ ಈ ಅತ್ಯದ್ಭುತ ಸಾಹಸಕ್ಕೆ ಸಾಕ್ಷಿಯಾದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...