alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಷಣ ಮಾತ್ರದಲ್ಲಿ ಪುಡಿಪುಡಿಯಾಯ್ತು 3 ಕೋಟಿ ಮೌಲ್ಯದ ಕಾರು

ಎಷ್ಟೋ ಜನರ ಪಾಲಿಗೆ ಕಾರು ಕೇವಲ ಸಾರಿಗೆಯ ಸಾಧನವಲ್ಲ, ಪ್ರತಿಷ್ಠೆಯ ಸಂಕೇತ. ಹಾಗಾಗಿ ಕಾರಿಗೆ ಒಂದು ಸ್ವಲ್ಪ ಗೀರು ಬಿದ್ರೂ ಅವರಿಗೆ ನೋವಾಗುತ್ತದೆ. ಆದ್ರೆ  ಬ್ರಿಟನ್ ನಲ್ಲಿ 3 ಕೋಟಿ ಬೆಲೆಬಾಳುವ ಫೆರಾರಿ 458 ಸ್ಪೈಡರ್ ಸೂಪರ್ ಕಾರನ್ನು ಪೊಲೀಸರು ನಿಷ್ಕರುಣೆಯಿಂದ ಪುಡಿಗಟ್ಟಿದ್ದಾರೆ.

ಜಾಹಿದ್ ಖಾನ್ ಎಂಬ ಕೋಟ್ಯಾಧೀಶನಿಗೆ ಸೇರಿದ ಕಾರು ಇದು. ಬಾಡಿಗೆದಾರರನ್ನು ಮನೆಯಿಂದ ಅಕ್ರಮವಾಗಿ ಹೊರಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ ಕೋರ್ಟ್ ಗೆ ಹಾಜರಾಗಿದ್ದ. ಆದ್ರೆ ಕಾರನ್ನು ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿ ಹೋಗಿದ್ದ.

ಕೆಲದಿನಗಳ ಹಿಂದಷ್ಟೆ ಜಾಹಿದ್ ಕಾರು ಅಪಘಾತಕ್ಕೀಡಾಗಿತ್ತು. ಅದಕ್ಕೆ ಇನ್ಷೂರೆನ್ಸ್ ಕೂಡ ಇರಲಿಲ್ಲ. ಹಾಗಾಗಿ ಪೊಲೀಸರು ಸ್ವಲ್ಪವೂ ತಡಮಾಡದೇ ಕಾರನ್ನು ನಾಶಮಾಡಿಬಿಟ್ಟಿದ್ದಾರೆ.

ಆದ್ರೆ ತನ್ನ ಕಾರಿಗೆ ಇನ್ಷೂರೆನ್ಸ್ ಇತ್ತು, ನಾನೇ ಅದರ ಮಾಲೀಕ. ಪೊಲೀಸರು ಅನ್ಯಾಯ ಮಾಡಿದ್ದಾರೆ ಅಂತಾ 3 ಕೋಟಿ ಮೌಲ್ಯದ ಕಾರು ಕಳೆದುಕೊಂಡಿರೋ ಜಾಹಿದ್ ಅಲವತ್ತುಕೊಳ್ತಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...