alex Certify
ಕನ್ನಡ ದುನಿಯಾ       Mobile App
       

Kannada Duniya

ದಂಗಾಗುವಂತಿದೆ ಈ ಪುಣ್ಯಾತ್ಮನ ಹುಚ್ಚಾಟ

gun face

ಜನ ತಮ್ಮನ್ನು ಗುರುತಿಸಬೇಕು. ತಾವು ಫೇಮಸ್ ಆಗಬೇಕೆಂಬ ಹಂಬಲ ಹೆಚ್ಚಿನ ಮಂದಿಗೆ ಸಹಜವಾಗಿ ಇರುತ್ತದೆ. ಅದರಲ್ಲಿಯೂ ಏನಾದರೂ ಸರಿಯೇ ತಾವು ಹೆಸರು ಮಾಡಬೇಕೆಂಬ ವಿಚಿತ್ರ ಹಂಬಲವನ್ನು ಕೆಲವರು ಹೊಂದಿರುತ್ತಾರೆ.

ಹೀಗೆ, ಜನರೆಲ್ಲಾ ತನ್ನನ್ನು ಗುರುತಿಸಬೇಕು. ತಾನು ರಾತ್ರಿ ಬೆಳಗಾಗುವುದರಲ್ಲಿ ಹೆಸರು ಮಾಡಬೇಕೆಂದುಕೊಂಡ ವ್ಯಕ್ತಿಯೊಬ್ಬ ತನ್ನ ಮುಖಕ್ಕೆ ತಾನೇ ಗುಂಡು ಹಾರಿಸಿಕೊಂಡಿದ್ದಾನೆ. ಅಂದ ಹಾಗೆ, ಈ ಪುಣ್ಯಾತ್ಮನ ಹೆಸರು ಕೆಸ್ಟೆರ್ ನೈಟ್. ಈತ ರ್ಯಾಂಪ್ ಸಂಗೀತಗಾರನಾಗಿದ್ದು, ಪ್ರಸ್ತುತ ಹೆಚ್ಚು ಜನಪ್ರಿಯವಾಗಿರುವ ಸಾಮಾಜಿಕ ಜಾಲತಾಣಗಳಲ್ಲಿ ದಿಢೀರ್ ಫೇಮಸ್ ಆಗಬೇಕೆಂಬ ಉದ್ದೇಶದಿಂದ ತನ್ನ ಕೆನ್ನೆಗೆ ತಾನೇ ಗುಂಡು ಹಾರಿಸಿಕೊಂಡಿದ್ದಾನೆ.

ಹೀಗೆ ಗುಂಡು ಹಾರಿಸಿಕೊಂಡ ಫೋಟೋ, ವಿಡಿಯೋವನ್ನು ಪೋಸ್ಟ್ ಮಾಡಿ, ತಾನು ಸ್ಟಂಟ್ ಮ್ಯೂಸಿಕ್ ವಿಡಿಯೋ ತೆಗೆಯಲು ಮುಂದಾಗಿದ್ದೆ. ಯಾವ ಕ್ಯಾಮೆರಾಮೆನ್ ಕೂಡ ಒಪ್ಪದ ಕಾರಣ, ನಾನೇ ಸೆಲ್ಫಿ ವಿಡಿಯೋ ತೆಗೆಯುತ್ತಲೇ ಗುಂಡುಹಾರಿಸಿಕೊಂಡಿದ್ದೇನೆ ಎಂದು ಹೇಳಿದ್ದಾನೆ. ಈತನ ಕೆನ್ನೆಯಲ್ಲಿ ತೂರಿದ ಗುಂಡು ತೀವ್ರಗಾಯ ಮಾಡಿದ್ದು, ಆತ ಆಸ್ಪತ್ರೆಗೆ ಸೇರಿದ್ದಾನೆ. ಈತನ ಹುಚ್ಚಾಟ ಜಾಲತಾಣದಲ್ಲಿ ವೈರಲ್ ಆಗಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...