alex Certify
ಕನ್ನಡ ದುನಿಯಾ       Mobile App
       

Kannada Duniya

ವೇಟರ್ ಗೆ 500 ಡಾಲರ್ ಟಿಪ್ಸ್ ಸಿಗಲು ಕಾರಣವೇನು ?

377B575600000578-0-image-a-3_1471856274905

ಹೊಟೇಲ್ ಗೆ ಹೋದ್ರೆ ವೇಟರ್ ಗೆ ಟಿಪ್ಸ್ ಕೊಡೋದು ಈಗ ಮಾಮೂಲಿ. 10-100 ರೂಪಾಯಿ ಒಳಗೆ ಟಿಪ್ಸ್ ಕೊಟ್ಟು ಬರ್ತಾರೆ ಗ್ರಾಹಕರು. ಆದ್ರೆ ಅಮೆರಿಕಾದಲ್ಲೊಬ್ಬ ವ್ಯಕ್ತಿ ವೇಟರ್ ಗೆ ಕೊಟ್ಟ ಟಿಪ್ಸ್ ಹಣ ಕೇಳಿದ್ರೆ ಆಶ್ಚರ್ಯವಾಗುತ್ತೆ. ಹಾಗೆ ಆತ ಅಷ್ಟು ಹಣ ಕೊಡಲು ಮಹತ್ವದ ಕಾರಣವೂ ಇದೆ.

ಡಲ್ಲಾಸ್ ರೆಸ್ಟೋರೆಂಟೊಂದರಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿರುವ ಸಿಮನ್ಸ್ ಎಂಬಾತನಿಗೆ ಗ್ರಾಹಕನೊಬ್ಬ 500 ಡಾಲರ್ ನೀಡಿದ್ದಾನೆ. ರೆಸ್ಟೋರೆಂಟ್ ಗೆ ಬಂದ ವ್ಯಕ್ತಿ ಅತಿ ಕಡಿಮೆ ಅಂದ್ರೆ 0.37 ಡಾಲರ್ ಬೆಲೆಯ ಆಹಾರ ಪಡೆದಿದ್ದಾನೆ. ನಂತ್ರ ವೇಟರ್ ಗೆ 500 ಡಾಲರ್ ನೀಡಿ, ಪೇಪರ್ ಮೇಲೆ ಧನ್ಯವಾದ ಎಂದು ಬರೆದಿದ್ದಾನೆ. ನನ್ನ ಅಮ್ಮ, ಅಪ್ಪ ಸಾವನ್ನಪ್ಪಿದ ನಂತ್ರ ಇಷ್ಟು ಸಂತೋಷವಾಗಿರುವುದನ್ನು ನೋಡಿರಲಿಲ್ಲ ಎಂದು ಬರೆದಿದ್ದಾನೆ.

ವಾಸ್ತವವಾಗಿ ಸಿಮನ್ಸ್ ಹಿಂದಿನ ದಿನ ದಿನಸಿ ಅಂಗಡಿಯೊಂದಕ್ಕೆ ಹೋಗಿದ್ದ. ಅಲ್ಲಿ ಅಜ್ಜಿಯೊಬ್ಬಳು ನೋವಿನಲ್ಲಿರುವುದನ್ನು ನೋಡಿದ್ದಾನೆ. ಆಕೆಗೆ ನೆರವಾದ ಸಿಮನ್ಸ್, ಆಕೆ ಜೊತೆ ಮಾತನಾಡಿ, ದಿನಸಿ ಬಿಲ್ ತಾನೇ ತುಂಬಿದ್ದಾನೆ. ತಾಯಿಗೆ ನೆರವಾದ ಸಿಮನ್ಸ್ ಗೆ ಮಗ ಧನ್ಯವಾದ ಹೇಳಲು ಹೊಟೇಲ್ ಗೆ ಬಂದಿದ್ದಾನೆ. ಟಿಪ್ಸ್ ರೂಪದಲ್ಲಿ ಹಣ ನೀಡಿದ್ದಾನೆ. ಇದನ್ನು ನೋಡಿದ ಸಿಮನ್ಸ್ ಕಣ್ಣಲ್ಲಿ ನೀರು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...