alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಅಡಗಿಸಿಟ್ಟಿರುವ ಅಣ್ವಸ್ತ್ರಗಳು ಉಗ್ರರ ಕೈಸೇರುವ ಆತಂಕ

ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳು ಕಳವಾಗುವ ಭೀತಿ ಇದೆ ಅಂತಾ ಅಮೆರಿಕದ ಥಿಂಕ್ ಟ್ಯಾಂಕ್ ವರದಿ ಎಚ್ಚರಿಸಿದೆ. ಪಾಕಿಸ್ತಾನ 9 ಸ್ಥಳಗಳಲ್ಲಿ ತನ್ನ ಬಳಿಯಿರೋ ಅಣ್ವಸ್ತ್ರಗಳನ್ನು ಅಡಗಿಸಿಟ್ಟಿದೆ. ಆದ್ರೆ ಅವುಗಳಿಗೆ ಸೂಕ್ತ ಭದ್ರತೆಯಿಲ್ಲ, ಯಾವುದೇ ಕ್ಷಣದಲ್ಲಾದ್ರೂ ಕಳವಾಗಬಹುದು ಅಂತಾ ಮುನ್ಸೂಚನೆ ನೀಡಿದೆ.

ಪರಮಾಣು ಸಂಘರ್ಷ ಎದುರಾದರೆ ಭಾರತದ ವಿರುದ್ಧ ಪ್ರಯೋಗಿಸಲು ಶಾರ್ಟ್ ರೇಂಜ್ ಅಣ್ವಸ್ತ್ರಗಳನ್ನು ಪಾಕಿಸ್ತಾನ ತಯಾರಿಸುತ್ತಿದೆ ಅಂತಾ ಅಮೆರಿಕದ ಶಸ್ತ್ರಾಸ್ತ್ರ ತಜ್ಞ ಹ್ಯಾನ್ಸ್ ಕ್ರಿಸ್ಟೆನ್ಸನ್ ತಿಳಿಸಿದ್ದಾರೆ. ಪ್ರಾದೇಶಿಕ ತಾಣಗಳಲ್ಲೇ ಇವನ್ನು ಕೂಡ ಪಾಕಿಸ್ತಾನ ಶೇಖರಿಸಿಟ್ಟಿದೆಯಂತೆ.

ಪಾಕಿಸ್ತಾನದ ಬಳಿ ಕಡಿಮೆ ಅಂದ್ರೂ 130-140 ಯುದ್ಧತಂತ್ರ ಪರಮಾಣು ಶಸ್ತ್ರಾಸ್ತ್ರಗಳಿವೆ. ಅಷ್ಟೇ ಅಲ್ಲ ದಿನೇ ದಿನೇ ಅವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ ಅಂತಾ ಹ್ಯಾನ್ಸ್ ಮಾಹಿತಿ ನೀಡಿದ್ದಾರೆ. ಪಾಕಿಸ್ತಾನದ ಬಳಿಯಿರೋ ಅಣ್ವಸ್ತ್ರಗಳು ಉಗ್ರರ ಕೈಸೇರಬಹುದು ಅನ್ನೋದು ಅಮೆರಿಕದ ಆತಂಕ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...