alex Certify
ಕನ್ನಡ ದುನಿಯಾ       Mobile App
       

Kannada Duniya

ದಿನಕ್ಕೆ 50 ಬಾರಿ ವಾಂತಿ ಮಾಡಿಕೊಳ್ತಾಳೆ ಈ ಹುಡುಗಿ

anna-giles

ವಿಶ್ವದಲ್ಲಿ ಆತಂಕಕಾರಿ ರೋಗಗಳು ಕಾಣಿಸಿಕೊಳ್ತಾ ಇವೆ. ಕೆಲವೊಂದು ರೋಗಗಳಿಗೆ ಔಷಧಿಯೇ ಇಲ್ಲ. ಮತ್ತೆ ಕೆಲವೊಂದು ಖಾಯಿಲೆಗಳಿಗೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ವೈದ್ಯರಿಗೆ ಸಾಧ್ಯವಾಗ್ತಾ ಇಲ್ಲ. ನೋಡುಗರಿಗೆ ಸಾಮಾನ್ಯ ವಾಂತಿಯಂತೆ ಕಾಣುವ ಒಂದು ರೋಗ ಹದಿಹರೆಯದ ಹುಡುಗಿಯ ಜೀವವನ್ನೇ ಬಲಿ ಪಡೆಯುತ್ತಿದೆ.

17 ವರ್ಷದ ಅನ್ನಾ ಗೈಲ್ಸ್ ಎಂಬಾಕೆ ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ದಾಳೆ. ದಿನಕ್ಕೆ 50 ಕ್ಕಿಂತಲೂ ಹೆಚ್ಚು ಬಾರಿ ಆಕೆ ವಾಂತಿ ಮಾಡಿಕೊಳ್ಳುತ್ತಾಳೆ. ಕಳೆದ ಮೂರು ವರ್ಷಗಳ ಹಿಂದೆ ಕಾಣಿಸಿಕೊಂಡ ಈ ರೋಗ ಆಕೆ ಹಾಸಿಗೆ ಹಿಡಿಯುವಂತೆ ಮಾಡಿದೆ. 14 ನೇ ವಯಸ್ಸಿನಲ್ಲಿ ಅನ್ನಾ ಗೈಲ್ಸ್ ಗೆ ಫುಡ್ ಪಾಯಿಸನ್ ಆಗಿತ್ತು. ಆ ನಂತ್ರ ಆಕೆ ಚೇತರಿಸಿಕೊಳ್ಳಲಿಲ್ಲ.

ವೈದ್ಯರಿಗೆ ಇದು ಯಾವ ಖಾಯಿಲೆ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಅನೇಕ ಹಾಸ್ಪಿಟಲ್ ಸುತ್ತಿ ಬಂದಿದ್ದಾಳೆ ಹುಡುಗಿ. ಮೆದುಳಿನ ಟ್ಯೂಮರ್, ಅಲರ್ಜಿ ಹೀಗೆ ವೈದ್ಯರು ಬೇರೆ ಬೇರೆ ರೋಗದ ಹೆಸರು ಹೇಳುತ್ತಿದ್ದಾರೆ. ಈ ರೋಗದಿಂದ ಶಾಲೆಯನ್ನು ಅರ್ಧಕ್ಕೆ ಬಿಟ್ಟಿರುವ ಅನ್ನಾ, ಹಾಸಿಗೆಯಲ್ಲಿ ಕಾಲ ಕಳೆಯುವಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...