alex Certify
ಕನ್ನಡ ದುನಿಯಾ       Mobile App
       

Kannada Duniya

ಇಸ್ರೇಲ್ ಗೆ ಪ್ರಯಾಣ ಬೆಳೆಸುವ ಭಾರತೀಯರಿಗೆ ಸಿಹಿ ಸುದ್ದಿ

ಇಸ್ರೇಲ್ ಗೆ ಪ್ರಯಾಣ ಬೆಳೆಸುವ ಭಾರತೀಯರಿಗೆ ಅಲ್ಲಿನ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ವೀಸಾ ಶುಲ್ಕದಲ್ಲಿ ಭಾರೀ ಕಡಿತ ಮಾಡಿದ್ದು, ಈ ಮೂಲಕ ಭಾರತೀಯ ಪ್ರವಾಸಿಗರನ್ನು ಸೆಳೆಯಲು ಮುಂದಾಗಲಾಗಿದೆ.

ಬಿ2 ವರ್ಗದ ವೀಸಾ ಶುಲ್ಕವನ್ನು 1,700 ರೂಪಾಯಿಗಳಿಂದ 1,100 ರೂಪಾಯಿಗಳಿಗೆ ಇಳಿಕೆ ಮಾಡಲಾಗಿದೆ. ಈ ಆದೇಶ ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಇಸ್ರೇಲ್ ಗೆ ಆಗಮಿಸುವ ನಿರೀಕ್ಷೆಯನ್ನು ಇಸ್ರೇಲ್ ಸರ್ಕಾರ ಹೊಂದಿದೆ.

ಈಗಾಗಲೇ ಭಾರತೀಯರು ವೀಸಾ ಪಡೆಯುವ ನಿಯಮವನ್ನು ಇಸ್ರೇಲ್ ಸರ್ಕಾರ ಸರಳಗೊಳಿಸಿದ್ದು, ಈಗ ವೀಸಾ ಶುಲ್ಕವನ್ನು ಇಳಿಕೆ ಮಾಡುವ ಮೂಲಕ ಹೆಚ್ಚಿನ ಸಂಖ್ಯೆಯ ಭಾರತೀಯರನ್ನು ಸೆಳೆಯುವ ಉದ್ದೇಶ ಇಸ್ರೆಲ್ ಸರ್ಕಾರದ್ದಾಗಿದೆ.

ಕಳೆದ ಮೂರು ವರ್ಷಗಳಿಂದ ಇಸ್ರೇಲ್ ಗೆ ಭೇಟಿ ನೀಡುತ್ತಿರುವ ಭಾರತೀಯರ ಸಂಖ್ಯೆ ಹೆಚ್ಚಾಗಿದ್ದು, ಕಳೆದ ವರ್ಷ ಸುಮಾರು 60 ಸಾವಿರ ಭಾರತೀಯರು ಇಸ್ರೇಲ್ ಗೆ ಭೇಟಿ ನೀಡಿದ್ದರೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...