alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಡೋಮ್ ಬದಲಿಗೆ ಪ್ರೇಮಿಗಳು ಬಳಸಿದ್ದೇನು ?

Virgin couple use plastic bag instead of condom - end up in hospitalಲೈಂಗಿಕ ವಿಚಾರಗಳ ಕುರಿತು ಮುಕ್ತವಾಗಿ ಮಾತನಾಡಲು ಹಲವರು ಹಿಂಜರಿಯುತ್ತಾರೆ. ಹೀಗೆ ಕಾಂಡೋಮ್ ಖರೀದಿಸಲು ಮುಜುಗರಪಟ್ಟುಕೊಂಡ ವಿಯೆಟ್ನಾಂನ ಪ್ರೇಮಿಗಳು ಆಸ್ಪತ್ರೆ ಸೇರಿದ್ದಾರೆ.

ಅವರಿಬ್ರೂ ಕಾಲೇಜು ವಿದ್ಯಾರ್ಥಿಗಳು, ಇದೇ ಮೊದಲ ಬಾರಿಗೆ ದೈಹಿಕ ಸಂಪರ್ಕ ಬೆಳೆಸಿದ್ರು. ಮೆಡಿಕಲ್ ಶಾಪ್ ನಲ್ಲಿ ಕಾಂಡೋಮ್ ಕೊಂಡುಕೊಳ್ಳಲು ಇಬ್ಬರಿಗೂ ಮುಜುಗರ. ಜೊತೆಗೆ ತಮ್ಮಿಬ್ಬರ ಸಂಬಂಧ ಬಹಿರಂಗವಾಗಬಹುದು ಅನ್ನೋ ಆತಂಕ.

ಸೇಫ್ ಸೆಕ್ಸ್ ಗಾಗಿ ಪ್ಲಾಸ್ಟಿಕ್ ಬ್ಯಾಗ್ ಬಳಸೋಣ ಅಂತಾ ಹುಡುಗ ಸಲಹೆ ಕೊಟ್ಟಿದ್ದ. ಇದಕ್ಕೆ ಪ್ರಿಯತಮೆಯೂ ಸೈ ಎಂದಿದ್ದಾಳೆ. ಪರಿಣಾಮ ಇಬ್ಬರ ಜನನಾಂಗಗಳಿಗೆ ತೀವ್ರ ಗಾಯಗಳಾಗಿದ್ದು ರಕ್ತಸ್ರಾವದಿಂದ ಬಳಲಿದ್ದಾರೆ.

ಬಳಿಕ ಪ್ರೇಮಿಗಳನ್ನು ಹನೋಯ್ ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ಮೇಲೆ ಇಂತಹ ಅವಾಂತರ ಮಾಡಿಕೊಳ್ಳಬೇಡಿ ಅಂತಾ ವೈದ್ಯರು ಎಚ್ಚರಿಸಿದ್ದಾರೆ. ಕಾಂಡೋಮ್ ಗೆ ಪರ್ಯಾಯವಾಗಿ ಪ್ಲಾಸ್ಟಿಕ್ ಬ್ಯಾಗ್ ಅಥವಾ ಇನ್ನಿತರ ವಸ್ತುಗಳನ್ನು ಬಳಸಕೂಡದು ಅನ್ನೋದು ವೈದ್ಯರ ಸಲಹೆ. ಇದರಿಂದ ಜನನಾಂಗಗಳಿಗೆ ಭಾರೀ ಅಪಾಯವಾಗುವ ಸಾಧ್ಯತೆ ಇದೆ ಅಂತಾ ಎಚ್ಚರಿಕೆ ನೀಡಿ, ಪ್ರೇಮಿಗಳನ್ನು ಕಳುಹಿಸಿಕೊಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...