alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಂಬ್ ಗೆ ಬೆದರಿ ವಿಮಾನದಿಂದ ಪ್ರಯಾಣಿಕರ ಜಂಪ್

virgin_atlantic_story_647_060617015730

ಆಸ್ಟ್ರೇಲಿಯಾದ ವಿಮಾನವೊಂದರಲ್ಲಿ ಬಾಂಬ್ ಇದೆ ಅನ್ನೋ ಸುದ್ದಿ ಅಲ್ಲೋಲ ಕಲ್ಲೋಲವನ್ನೇ ಎಬ್ಬಿಸಿದೆ. ಸಿಡ್ನಿಯಿಂದ ಅಲ್ಬರಿಗೆ ಹೊರಟಿದ್ದ ವರ್ಜಿನ್ ವಿಎ 1174 ವಿಮಾನದ ಬಾತ್ ರೂಮಿನಲ್ಲಿ ನೋಟ್ ಒಂದನ್ನು ಇಡಲಾಗಿತ್ತು. ವಿಮಾನದಲ್ಲಿ ಬಾಂಬ್ ಇದೆ ಎಂಬ ಬೆದರಿಕೆಯುಳ್ಳ ನೋಟ್ ಅದು.

ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಷ ಮಾಡಲಾಯ್ತು. ವಿಮಾನದಿಂದ ಕೆಳಗಿಳಿಯುವ ಆತುರದಲ್ಲಿ ಹಲವರು ತಮ್ಮ ಲಗೇಜನ್ನು ಕೂಡ ಬಿಟ್ಟು ಕೆಳಕ್ಕೆ ಹಾರಿದ್ದಾರೆ. ಆದ್ರೆ ಯಾರಿಗೂ ಗಾಯಗಳಾಗಿಲ್ಲ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ಲ್ಯಾಂಡ್ ಆಗ್ತಿದ್ದಂತೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳವನ್ನು ಕರೆಸಿ ತಪಾಸಣೆ ನಡೆಸಲಾಗಿದೆ. ಆದ್ರೆ ವಿಮಾನದಲ್ಲಿ ಯಾವುದೇ ರೀತಿಯ ಸ್ಫೋಟಕ ವಸ್ತು ಪತ್ತೆಯಾಗಿಲ್ಲ. ಇದೊಂದು ಹುಸಿಬಾಂಬ್ ಬೆದರಿಕೆ ಅಂತಾ ಪೊಲೀಸರು ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...