alex Certify VIRAL VIDEO: ಆತ್ಮಹತ್ಯೆಗೆತ್ನಿಸಿದ ಮಹಿಳೆಯನ್ನು ಒಳಗೆ ಒದ್ದು ಕಾಪಾಡಿದ ಅಗ್ನಿಶಾಮಕ ಸಿಬ್ಬಂದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

VIRAL VIDEO: ಆತ್ಮಹತ್ಯೆಗೆತ್ನಿಸಿದ ಮಹಿಳೆಯನ್ನು ಒಳಗೆ ಒದ್ದು ಕಾಪಾಡಿದ ಅಗ್ನಿಶಾಮಕ ಸಿಬ್ಬಂದಿ

Firefighter rescues suicidal woman by kicking her back inside home. Old video goes viral - India Today

ಟೊಕಿಯೊ: ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಮಹಿಳೆಯನ್ನು ವ್ಯಕ್ತಿಯೊಬ್ಬ ಕುತೂಹಲ ರೀತಿಯಲ್ಲಿ ರಕ್ಷಣೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗುತ್ತಿದೆ. ಮಹಿಳೆಯನ್ನು ಅಸಾಮಾನ್ಯ ರೀತಿಯಲ್ಲಿ ರಕ್ಷಿಸಿರುವ ಈ ಘಟನೆ ಹಳೆಯದ್ದಾಗಿದ್ದು, ಪುನಃ ವೈರಲ್​ ಆಗಿದೆ.

ಈಗ ವೈರಲ್ ಆಗಿರುವ ವಿಡಿಯೋವನ್ನು ಟ್ವಿಟರ್‌ನಲ್ಲಿ ‘ಕಮ್ಯುನಿಕೇಟರ್ ಆಫ್ ಇಲೋರಿನ್’ ಎಂಬ ಪುಟ ಹಂಚಿಕೊಂಡಿದೆ. ಇದು ಜಪಾನಿನಲ್ಲಿ ನಡೆದಿರುವ ಘಟನೆ.

ಆತ್ಮಹತ್ಯೆ ಮಾಡಿಕೊಳ್ಳುವ ಸಂಬಂಧ ಕಿಟಕಿಯ ರೇಲಿಂಗ್‌ನಲ್ಲಿ ಕುಳಿತಿದ್ದ ಮಹಿಳೆಯನ್ನು ಅಗ್ನಿಶಾಮಕ ಸಿಬ್ಬಂದಿ ರೋಚಕವಾಗಿ ರಕ್ಷಣೆ ಮಾಡಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಮಹಿಳೆ ರೀಲಿಂಗ್​ನಲ್ಲಿ ಕುಳಿತು ಕೆಳಕ್ಕೆ ಜಿಗಿಯಲು ಯತ್ನಿಸುತ್ತಿದ್ದ ವೇಳೆ, ಅಗ್ನಿಶಾಮಕ ಸಿಬ್ಬಂದಿ ಆ ಮಹಿಳೆಯನ್ನು ಒದ್ದು ಅಪಾರ್ಟ್​ಮೆಂಟ್​ ಒಳಕ್ಕೆ ತಳ್ಳಿದ್ದಾನೆ.

ಕೇಳಲು ಇದು ವಿಚಿತ್ರ ಎನಿಸಿದರೂ ಈ ವಿಡಿಯೋ ನೋಡಿದ ಮೇಲೆ ಅಗ್ನಿಶಾಮಕ ಸಿಬ್ಬಂದಿಯ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ದೇವರಂತೆ ಬಂದು ಮಹಿಳೆಯ ಜೀವ ಕಾಪಾಡಿದ ಎಂದು ಎಲ್ಲರೂ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...