alex Certify
ಕನ್ನಡ ದುನಿಯಾ       Mobile App
       

Kannada Duniya

ಹಾವಿನ ಹೊಟ್ಟೆಯಿಂದ ಹೊರಬಿತ್ತು ಟೆನಿಸ್ ಬಾಲ್

snake-tennis-ball_650x400_81486653084

ಆಸ್ಟ್ರೇಲಿಯಾದಲ್ಲಿ ಹಾವೊಂದು ಆಕಸ್ಮಿಕವಾಗಿ ಟೆನಿಸ್ ಬಾಲ್ ಅನ್ನೇ ನುಂಗಿಬಿಟ್ಟಿತ್ತು. ಅದನ್ನು ಉಗುಳಲಾಗದೆ ಕಷ್ಟಪಡ್ತಾ ಇದ್ದ ಹಾವಿಗೆ ಸರೀಸೃಪಗಳನ್ನು ಹಿಡಿಯುವ ಸಂಘಟನೆಯೊಂದು ನೆರವಾಗಿದೆ. ಹೊಟ್ಟೆಯಿಂದ ನಿಧಾನವಾಗಿ ಮಸಾಜ್ ಮಾಡಿ ಹಾವಿನ ಬಾಯಿಯ ಮೂಲಕ ಚೆಂಡನ್ನು ಹೊರಹಾಕಿದೆ.

ಫೆಬ್ರವರಿ 8ರಂದು ಈ ವಿಡಿಯೋವನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಸುಮಾರು 11 ಲಕ್ಷ ಮಂದಿ ವೀಕ್ಷಿಸಿದ್ದು,  7500  ಜನರು ಶೇರ್ ಮಾಡಿದ್ದಾರೆ. 2400ಕ್ಕೂ ಹೆಚ್ಚು ಕಮೆಂಟ್ ಗಳು ಬಂದಿವೆ.

ಮನೆ ಮಾಲೀಕನೊಬ್ಬ ಹೊಟ್ಟೆ ಉಬ್ಬಿದಂತಾಗಿದ್ದ ಹಾವನ್ನು ಗಮನಿಸಿ, ಹಾವು ಹಿಡಿಯುವವರಿಗೆ ಕರೆ ಮಾಡಿದ್ದ. ಟೌನ್ಸ್ ವಿಲ್ಲೆ ಸ್ನೇಕ್ ಹ್ಯಾಂಡಲರ್ಸ್ ತಂಡ ಹಾವನ್ನು ಕೊಂಡೊಯ್ದು ಎಕ್ಸರೇ ಮಾಡಿ ನೋಡಿದಾಗ ಹೊಟ್ಟೆಯಲ್ಲಿ ಚೆಂಡು ಇರೋದು ಪತ್ತೆಯಾಗಿದೆ. ಸುಮಾರು 20 ನಿಮಿಷಗಳ ಕಾಲ ಮಸಾಜ್ ಮಾಡಿ ಆ ಚೆಂಡನ್ನು ಹೊರತೆಗೆಯಲಾಗಿದೆ. ಸದ್ಯ ಹಾವಿಗೆ ವಿಶ್ರಾಂತಿ ಬೇಕಿದ್ದು, ನಂತರ ಕಾಡಿಗೆ ಬಿಡಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...