alex Certify
ಕನ್ನಡ ದುನಿಯಾ       Mobile App
       

Kannada Duniya

ವಿಕ್ಟೋರಿಯಾ ಫ್ಯಾಷನ್ ಶೋನಲ್ಲಿ ನಡೀತು ಅಚಾತುರ್ಯ

ದೊಡ್ಡ ದೊಡ್ಡ ಫ್ಯಾಷನ್ ಶೋಗಳಲ್ಲಿ ಕ್ಯಾಟ್ ವಾಕ್ ಮಾಡೋ ಲಲನೆಯರು ಕೊಂಚ ತಡಬಡಾಯಿಸಿದ್ರೂ ಅನಾಹುತವಾಗಿಬಿಡುತ್ತೆ. ಶಾಂಘೈನಲ್ಲಿ ನಡೆದ ವಿಕ್ಟೋರಿಯಾಸ್ ಸೀಕ್ರೆಟ್ ಫ್ಯಾಷನ್ ಶೋನಲ್ಲಿ ಕೂಡ ಮಾಡೆಲ್ ಒಬ್ಬಳು ರ್ಯಾಂಪ್ ವಾಕ್ ಮಾಡ್ತಾ ಬಿದ್ದೇ ಹೋಗಿದ್ದಾಳೆ.

ಚೀನಾದ ರೂಪದರ್ಶಿ ಕ್ಸಿ ಮೆಂಗ್ಯೋ ಅಂದದ ಉಡುಗೆ ತೊಟ್ಟು ಬೆಕ್ಕಿನ ನಡಿಗೆಯಲ್ಲಿ ಬಂದಿದ್ಲು. ಹೈ ಹೀಲ್ಸ್ ಹಾಕಿದ್ದರಿಂದ ಆಕೆಯ ಕಾಲು ಜಾರಿದೆ, ವೇದಿಕೆ ಮೇಲೆ ಕ್ಸಿ ಬಿದ್ದಿದ್ದಾಳೆ. ಇದರಿಂದ ಮಾಡೆಲ್ ಗಾಬರಿಯಾಗಲಿಲ್ಲ, ಮುಜುಗರಕ್ಕೀಡಾಗಿಲ್ಲ. ನಗುನಗುತ್ತಲೇ ಮೇಲಕ್ಕೆದ್ದು ಮತ್ತೆ ಕ್ಯಾಟ್ ವಾಕ್ ಮುಂದುವರಿಸಿದ್ದಾಳೆ.

ನಂತರ ನಡೆದ ಅಚಾತುರ್ಯಕ್ಕಾಗಿ ದೇಶದ ಜನತೆಯ ಕ್ಷಮೆ ಕೇಳಿದ್ದಾಳೆ. ರೂಪದರ್ಶಿಗೆ ಜಾಲತಾಣಗಳಲ್ಲೂ ಭಾರೀ ಬೆಂಬಲ ವ್ಯಕ್ತವಾಗಿದೆ. ಈ ರೀತಿ ತನ್ನ ಬದುಕಿನಲ್ಲೂ ಹಲವು ಏರಿಳಿತಗಳನ್ನು ಕಂಡಿದ್ದೇನೆ ಅಂತಾ ಕ್ಸಿ ಮೆಂಗ್ಯೋ ಬರೆದುಕೊಂಡಿದ್ದಾಳೆ. ಅಮೆರಿಕದ ಖ್ಯಾತ ಮಾಡೆಲ್ ಗಳು ಕೂಡ ಕ್ಸಿ ಮೆಂಗ್ಯೋ ಧೈರ್ಯವನ್ನು ಮೆಚ್ಚಿ ಟ್ವೀಟ್ ಮಾಡಿದ್ದಾರೆ.

Xi Mengyao @ Victoria's Secret

😱 Chinese model Xi Mengyao takes a tumble at Victoria's Secret's Shanghai fashion show.👉 http://shst.me/fwe

Posted by Shanghaiist on Monday, November 20, 2017

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...