alex Certify
ಕನ್ನಡ ದುನಿಯಾ       Mobile App
       

Kannada Duniya

ರೋಗಿಯ ಕೊನೆಯಾಸೆ ಈಡೇರಿಸಿದ್ದಾರೆ ಆಂಬ್ಯುಲೆನ್ಸ್ ಸಿಬ್ಬಂದಿ

ಆಸ್ಟ್ರೇಲಿಯಾದಲ್ಲಿ ಸಾವಿನಂಚಿನಲ್ಲಿದ್ದ ಮಹಿಳೆಯ ಕೊನೆಯ ಆಸೆಯನ್ನು ಆಂಬ್ಯುಲೆನ್ಸ್ ಸಿಬ್ಬಂದಿ ಈಡೇರಿಸಿದ್ದಾನೆ. ಸಾಯುವ ಮುನ್ನ ಒಮ್ಮೆ ಬೀಚ್ ನೋಡಬೇಕು ಅನ್ನೋದು ಅವಳ ಆಸೆಯಾಗಿತ್ತು. ಪ್ಯಾರಾಮೆಡಿಕಲ್ ಸಿಬ್ಬಂದಿ ಅವಳನ್ನು ಆಸ್ಟ್ರೇಲಿಯಾದ ಹಾರ್ವೆ ಬೇನಲ್ಲಿರೋ ಬೀಚ್ ಗೆ ಕರೆತಂದ್ರು.

ಕ್ವೀನ್ಸ್ ಲ್ಯಾಂಡ್ ಆಂಬ್ಯುಲೆನ್ಸ್ ಸರ್ವೀಸ್ ಮೂಲಕ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಮಹಿಳೆ ತನ್ನ ಬಯಕೆಯನ್ನು ಸಿಬ್ಬಂದಿ ಬಳಿ ಹೇಳಿಕೊಂಡಿದ್ದಾಳೆ. ಅವಳಿಷ್ಟದಂತೆ ಕೊನೆಯ ಬಾರಿ ಸಮುದ್ರದ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದೆ.

ಈ ಬಗ್ಗೆ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಲಾಗಿದ್ದು, 24 ಗಂಟೆಗಳೊಳಗೆ 18,000 ಜನರು ಅದನ್ನು ಶೇರ್ ಮಾಡಿದ್ದಾರೆ. 55,000ಕ್ಕೂ ಹೆಚ್ಚು ಕಮೆಂಟ್ಸ್ ಬಂದಿವೆ. ಆಂಬ್ಯುಲೆನ್ಸ್ ಸಿಬ್ಬಂದಿ ರೋಗಿಗೆ ಕೊಟ್ಟ ಅತ್ಯದ್ಭುತ ಗಿಫ್ಟ್ ಇದು ಅಂತಾ ಬಣ್ಣಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...