alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಅಭ್ಯರ್ಥಿಯ ಚುನಾವಣಾ ಪ್ರಚಾರದ ವೈಖರಿ ಕೇಳಿದ್ರೆ ‘ಶಾಕ್’ ಆಗ್ತೀರಾ…!

ಚುನಾವಣೆ ಬಂದ್ರೆ ಸಾಕು ರಾಜಕಾರಣಿಗಳು ಮತ ಪಡೆಯೋಕೆ ಏನೆಲ್ಲಾ ಕಸರತ್ತು ಮಾಡ್ತಾರೆ ಎಂಬುದು ಗೊತ್ತಿರುವ ವಿಚಾರ.

ಪಾಕಿಸ್ತಾನದಲ್ಲಿ ಈಗ ಚುನಾವಣೆ ಕಾವು ಜೋರಾಗಿದೆ. ಪಕ್ಷೇತರ ಅಭ್ಯರ್ಥಿ ಮತ ಕೇಳಲು ಹಿಡಿದ ಮಾರ್ಗ ಕೊಂಚ ಡಿಫ್ರೆಂಟ್ ಆಗಿದೆ.

ಕರಾಚಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಅಯಾಜ್ ಮೆಮೊನ್ ಮೋಟಿವಾಲ್, ಮತದಾರರ ಗಮನ ಸೆಳೆಯಲು ವಿಭಿನ್ನ ಪ್ಲಾನ್ ಮಾಡಿಕೊಂಡಿದ್ದಾರೆ. ಅಂದಹಾಗೆ ಅಯಾಜ್ ಚರಂಡಿ, ಕಸದ ರಾಶಿಯಲ್ಲಿ ಕುಳಿತು ಫೋಟೋ ತೆಗೆಸಿಕೊಂಡಿದ್ದಾರೆ.

ಅಲ್ಲದೆ ಇವುಗಳನ್ನು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಈಗ ಸಖತ್ ವೈರಲ್ ಆಗಿದ್ದು, ಮತದಾರರನ್ನು ಸೆಳೆಯುತ್ತಿದೆ. ಸದ್ಯ ಇವರ ಫೋಟೋಗೆ 1800 ಲೈಕ್ ಬಂದಿದ್ದು, ನೂರಕ್ಕೂ ಹೆಚ್ಚು ಕಮೆಂಟ್ ಬಂದಿವೆ. ಇನ್ನು ಅಯಾಜ್ ಫೇಸ್ಬುಕ್ ಲೈವ್ ನಲ್ಲಿ ಚರಂಡಿ ನೀರನ್ನು ಕುಡಿದು, ಚುನಾವಣೆಯ ಪ್ರಚಾರ ನಡೆಸಿದ್ದಾರೆ. ಅಯಾಜ್ ವಿಭಿನ್ನ ಪ್ರಚಾರಕ್ಕೆ ಬೆಂಬಲವೂ ಸಿಕ್ಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...