alex Certify
ಕನ್ನಡ ದುನಿಯಾ       Mobile App
       

Kannada Duniya

ಸಹೋದರಿಯ ಸಾವನ್ನೇ ನೇರಪ್ರಸಾರ ಮಾಡಿದ್ಲು ಯುವತಿ

nicandro_and_gloria

ಕುಡಿದ ಅಮಲಲ್ಲಿ ಗಾಡಿ ಓಡಿಸ್ತಾ ಇದ್ದ 18 ವರ್ಷದ ಯುವತಿಯೊಬ್ಳು ತನ್ನ 14 ವರ್ಷದ ಸಹೋದರಿಯ ಸಾವನ್ನು ಇನ್ ಸ್ಟಾಗ್ರಾಮ್ನಲ್ಲಿ ನೇರ ಪ್ರಸಾರ ಮಾಡಿದ್ದಾಳೆ. ಸಹೋದರಿಯನ್ನು ಕೊಂದ ಆರೋಪದ ಮೇಲೆ ಅವಳನ್ನು ಬಂಧಿಸಲಾಗಿದೆ. ಒಬ್ಬ ಮಗಳನ್ನು ಕಳೆದುಕೊಂಡಿರೋ ಪೋಷಕರು ಈಗ ಹಿರಿ ಮಗಳು ಜೈಲು ಸೇರಿರೋದ್ರಿಂದ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಈ ಘಟನೆ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ಅಬಡುಲಿಯಾ ಎಂಬಾಕೆ ಕಾಡು ಓಡಿಸುತ್ತ ಹಾಡು ಕೇಳ್ತಾ ಇದ್ಲು, ತಾನು ಕೂಡ ಗುನುಗುತ್ತಿದ್ಲು. ಜೊತೆ ಜೊತೆಗೆ ಇನ್ ಸ್ಟಾಗ್ರಾಮ್ ನಲ್ಲಿ ಲೈವ್ ಆಗಿ ಪ್ರಸಾರ ಮಾಡ್ತಾ ಇದ್ಲು.

ಹಿಂಬದಿ ಸೀಟಿನಲ್ಲಿ ಅಬಡುಲಿಯಾಳ ಸಹೋದರಿ ಜಾಕಲೀನ್ ಹಾಗೂ ಇನ್ನೊಬ್ಬ ಬಾಲಕಿ ಕುಳಿತಿದ್ರು. ಆಗ ಇದ್ದಕ್ಕಿದ್ದಂತೆ ಕಾರು ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಕ್ಕಿಳಿದಿತ್ತು. ಬಾಲಕಿಯರ ಚೀತ್ಕಾರ ಕೇಳಿಸಿತ್ತು. ಅಬಡುಲಿಯಾ ಕಾರನ್ನು ಕಂಟ್ರೋಲ್ ಗೆ ತರಲು ಪ್ರಯತ್ನಿಸ್ತಾ ಇದ್ಲು.

ಈ ಅಪಘಾತದಲ್ಲಿ ಜಾಕಲೀನ್ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಅವಳನ್ನು ಎಬ್ಬಿಸಲು ಪ್ರಯತ್ನಿಸುತ್ತ ಅಬಡುಲಿಯಾ, ಅಲವತ್ತುಕೊಂಡಿದ್ದಾಳೆ. ನಿನ್ನ ಸಾವನ್ನು ನಾನು ಬಯಸಿರಲಿಲ್ಲ ಅಂತೆಲ್ಲಾ ಹೇಳಿದ್ದಾಳೆ. ಕಳೆದ ರವಿವಾರ ಜಾಕಲೀನ್ ಳ 15 ನೇ ವರ್ಷದ ಹುಟ್ಟುಹಬ್ಬವಿತ್ತು. ಆದ್ರೆ ಅಷ್ಟರಲ್ಲಾಗ್ಲೇ ಆಕೆ ಇಹಲೋಕ ತ್ಯಜಿಸಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...