alex Certify
ಕನ್ನಡ ದುನಿಯಾ       Mobile App
       

Kannada Duniya

ಕಳ್ಳತನ ಕಂಡು ಹಿಡಿಯಲು ಕುದಿಯುವ ಎಣ್ಣೆ ಮೇಲೆ ನಡೆಯುವ ಶಿಕ್ಷೆ !

pak women forced to walk on boild oil

ಪಾಕಿಸ್ತಾನದಲ್ಲೊಂದು ಅಮಾನವೀಯ ಕೃತ್ಯ ನಡೆದಿದೆ. ತನ್ನ ಮನೆಯಲ್ಲಿ ನಡೆದಿದ್ದ ಕಳ್ಳತನವನ್ನು ಕಂಡು ಹಿಡಿಯಲು ಭೂ ಮಾಲೀಕನೊಬ್ಬ ಮಹಿಳೆ ಹಾಗೂ ಅಪ್ರಾಪ್ತ ಸೇರಿದಂತೆ ತಾನು ಅನುಮಾನಿಸಿದ್ದ ನಾಲ್ವರಿಗೆ ಕುದಿಯುವ ಎಣ್ಣೆ ಮೇಲೆ ನಡೆಯುವ ಶಿಕ್ಷೆ ವಿಧಿಸಿದ ಘಟನೆ ನಡೆದಿದೆ.

ಕೆಲ ದಿನಗಳ ಹಿಂದೆ ಮೊಹ್ಸಿನ್ ಎಂಬ ಭೂ ಮಾಲೀಕನ ಮನೆಯಲ್ಲಿ ಚಿನ್ನಾಭರಣ ಕಳುವಾಗಿತ್ತೆಂದು ಹೇಳಲಾಗಿದ್ದು, ಗ್ರಾಮಸ್ಥರಾದ ಸಾದಿಯಾ, ಕಾಶೀಫ್, ಶೆಹಜಾದ್ ಹಾಗೂ ಆಸೀಂ ಎಂಬವರ ಮೇಲೆ ಆತ ಅನುಮಾನ ವ್ಯಕ್ತಪಡಿಸಿದ್ದನೆಂದು ಹೇಳಲಾಗಿದೆ. ಈ ನಾಲ್ವರನ್ನು ತನ್ನ ಮನೆಗೆ ಕರೆಸಿಕೊಂಡ ಮೊಹ್ಸಿನ್ ಕುದಿಯುತ್ತಿರುವ ಎಣ್ಣೆಯ ಮೇಲೆ ನಡೆದು ತಮ್ಮ ಪ್ರಾಮಾಣಿಕತೆಯನ್ನು ಸಾಬೀತುಪಡಿಸುವಂತೆ ತಿಳಿಸಿದ್ದಾನೆ.

ಯಾರ ಕಾಲು ಸುಡುತ್ತದೋ ಅವರು ತಾವು ಕದ್ದಿರುವ ಚಿನ್ನಾಭರಣಗಳನ್ನು ತಂದೊಪ್ಪಿಸುವಂತೆ ತಾಕೀತು ಮಾಡಿದ್ದಾನೆ. ಆದರೆ ಈ ವಿಚಾರ ಗ್ರಾಮದ ಇತರೆಯವರಿಗೆ ತಿಳಿದಿದ್ದು, ಅವರುಗಳು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಪೊಲೀಸರು ಮೊಹ್ಸಿನ್ ಮನೆಗೆ ಬರುವಷ್ಟರಲ್ಲೇ ಆತ ತನ್ನ ಸಹಚರರ ಜೊತೆ ಪರಾರಿಯಾಗಿದ್ದನೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...