alex Certify
ಕನ್ನಡ ದುನಿಯಾ       Mobile App
       

Kannada Duniya

ನಾಟ್ ರೀಚಬಲ್ ಆಗಿದ್ದ ಮಲ್ಯ ಲಂಡನ್ ನಲ್ಲಿ ಪತ್ತೆ !

malya mn 10

ಸಾಲದ ಸುಳಿಯಲ್ಲಿ ಸಿಲುಕಿರುವ ಉದ್ಯಮಿ ವಿಜಯ್ ಮಲ್ಯ ಭಾರತದಿಂದ ಪರಾರಿಯಾಗಿದ್ದಾರೆ. 275 ಕೋಟಿ ರೂಪಾಯಿಯೊಂದಿಗೆ ಭಾರತದಿಂದ ಪಲಾಯನಗೈದ ಮಲ್ಯ ತಾವು ಹೇಳಿದಂತೆಯೇ ಲಂಡನ್ ನಲ್ಲಿ ನೆಲೆಸಿದ್ದಾರೆ.

ಉತ್ತರ ಲಂಡನ್ ನಲ್ಲಿ ಭವ್ಯ ಬಂಗಲೆಯೊಂದರಲ್ಲಿ ವಿಜಯ್ ಮಲ್ಯ ನೆಲೆಸಿದ್ದು, ಈ ಬಗ್ಗೆ ಮಾಹಿತಿ ನೀಡಲು ಅಲ್ಲಿನ ಭದ್ರತಾ ಸಿಬ್ಬಂದಿ ನಿರಾಕರಿಸಿದ್ದಾರೆ. ಉತ್ತರ ಲಂಡನ್ ಕ್ವೀನ್ ವ್ಯೂ ರಸ್ತೆಯಲ್ಲಿರುವ ಲೇಡಿ ವಾಕ್ ಹೆಸರಿನ ಕಂಟ್ರಿ ಹೌಸ್ ಬಂಗಲೆಯಲ್ಲಿ ವಿಜಯ್ ಮಲ್ಯ ನೆಲೆಸಿದ್ದಾರೆ. ಸುಮಾರು 30 ಎಕರೆಯಷ್ಟು ವಿಸ್ತಾರವಾದ ಪ್ರದೇಶದಲ್ಲಿ ಈ ಬೃಹತ್ ಬಂಗಲೆ ಇದೆ. ಭದ್ರತೆಗೆ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ಇಂತಹ ಭವ್ಯ ಬಂಗಲೆಯಲ್ಲಿ ಮಲ್ಯ ವಾಸವಾಗಿದ್ದಾರೆ ಎಂದು ಹೇಳಲಾಗಿದೆ.

ಭಾರತದಲ್ಲಿ ಕಿಂಗ್ ಫಿಷರ್ ಏರ್ ಲೈನ್ಸ್ ಸೇರಿದಂತೆ ವಿವಿಧ ಉದ್ಯಮಗಳಿಗಾಗಿ ಹಲವು ಬ್ಯಾಂಕ್ ಗಳಿಂದ ಸುಮಾರು 9000 ಕೋಟಿ ರೂಪಾಯಿ ಸಾಲ ಮಾಡಿರುವ ವಿಜಯ್ ಮಲ್ಯ, 275 ಕೋಟಿ ರೂ. ಹಣದೊಂದಿಗೆ ಈಗಾಗಲೇ ವಿದೇಶಕ್ಕೆ ಪರಾರಿಯಾಗಿರುವುದಾಗಿ ಹೇಳಲಾಗಿತ್ತಾದರೂ, ಇದೀಗ ಅದು ಅಧಿಕೃತವಾದಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...