alex Certify
ಕನ್ನಡ ದುನಿಯಾ       Mobile App
       

Kannada Duniya

ಮ್ಯಾಚ್ ನೋಡಲು ಬಂದ ಮಲ್ಯ: ಕಳ್ಳ….ಕಳ್ಳ ಎಂದ ಪ್ರೇಕ್ಷಕರು

malaya_755_1497184890_749x421

ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯ ಭಾರತ-ದಕ್ಷಿಣ ಆಫ್ರಿಕಾ ಪಂದ್ಯಕ್ಕೆ ಹಾಜರಾಗಿದ್ದಾರೆ ಮದ್ಯದ ದೊರೆ ಮಲ್ಯ. ಮಲ್ಯ ಮೈದಾನಕ್ಕೆ ಬರ್ತಾ ಇದ್ದಂತೆ ಕ್ರೀಡಾಂಗಣದ ಹೊರಗೆ ನಿಂತಿದ್ದ ಭಾರತೀಯ ಪ್ರೇಕ್ಷಕರು ಕಳ್ಳ-ಕಳ್ಳ ಎಂದು ಮಲ್ಯರನ್ನು ಲೇವಡಿ ಮಾಡಿದ್ದಾರೆ.

ಭಾರತದ ಬ್ಯಾಂಕ್ ಗಳಲ್ಲಿ 9 ಸಾವಿರ ಕೋಟಿ ರೂಪಾಯಿ ಸಾಲ ಮಾಡಿ ಓಡಿ ಹೋಗಿರುವ ಮಲ್ಯರನ್ನು ಕ್ರೀಡಾಂಗಣದ ಗೇಟ್ ಹೊರಗೆ ನೋಡಿದ ಭಾರತೀಯ ಅಭಿಮಾನಿಗಳು ಮಲ್ಯ ಹತ್ತಿರ ಬಂದಿದ್ದಾರೆ. ಮಲ್ಯ ಹತ್ತಿರ ಬಂದು ಕಳ್ಳ….ಕಳ್ಳ ಎಂದು ಕೂಗಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡದೆ ಒಳ ಹೋಗಿದ್ದಾರೆ ಮಲ್ಯ.

ಭಾರತ-ಪಾಕಿಸ್ತಾನದ ನಡುವೆ ನಡೆದ ಪಂದ್ಯಕ್ಕೂ ಮಲ್ಯ ಬಂದಿದ್ದರು. ಪಂದ್ಯದ ನಂತ್ರ ಮಲ್ಯ ಹಾಗೂ ಸುನೀಲ್ ಗವಾಸ್ಕರ್ ಒಟ್ಟಿಗಿದ್ದ ಫೋಟೋ ವೈರಲ್ ಆಗಿತ್ತು. ಆದ್ರೆ ಈ ಬಗ್ಗೆ ಮಲ್ಯ ಹಾಗೂ ಗವಾಸ್ಕರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಳೆದ ಮಾರ್ಚ್ ನಲ್ಲಿ ದೇಶ ಬಿಟ್ಟು ಓಡಿ ಹೋಗಿರುವ ಮಲ್ಯ ಇಂಗ್ಲೆಂಡ್ ನಲ್ಲಿದ್ದಾರೆಂಬ ವಿಚಾರ ಎಲ್ಲರಿಗೂ ಗೊತ್ತು. ಆತನನ್ನು ಭಾರತಕ್ಕೆ ಹಸ್ತಾಂತರಿಸಲು ಈಗಾಗಲೇ ಅಲ್ಲಿನ ಸರ್ಕಾರದ ಜೊತೆ ಮಾತುಕತೆ ನಡೆದಿದೆ. ಭಾರತದ ಒಂದು ತಂಡ ಇಂಗ್ಲೆಂಡ್ ತಲುಪಿದೆ. ಆದ್ರೆ ಮಲ್ಯ ಮಾತ್ರ ಆರಾಮಾಗಿ ಪಂದ್ಯ ನೋಡ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...