alex Certify
ಕನ್ನಡ ದುನಿಯಾ       Mobile App
       

Kannada Duniya

ಕೇಂದ್ರ ಸರ್ಕಾರದ ವಿರುದ್ಧ ಮಲ್ಯ ಗಂಭೀರ ಆರೋಪ

ಭಾರತೀಯ ಬ್ಯಾಂಕ್ ಗಳಲ್ಲಿ 9 ಸಾವಿರ ಕೋಟಿ ಸಾಲ ಮಾಡಿ ಬ್ರಿಟನ್ ಗೆ ಓಡಿ ಹೋಗಿರುವ ಮಲ್ಯ ಭಾರತದ ಮೇಲೆ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಭಾರತದ ಕೆಲ ಜನರು ತನ್ನನ್ನು ಶಿಲುಬೆಗೆರಿಸುವ ಪ್ರಯತ್ನದಲ್ಲಿದ್ದಾರೆಂದು ಮಲ್ಯ ಹೇಳಿದ್ದಾರೆ. ಬ್ಯಾಂಕುಗಳಿಗೆ ಸಾಲ ಮರುಪಾವತಿಸಲು ಸಿದ್ಧನಿದ್ದೇನೆ. ಆದ್ರೆ ಬಲವಂತವಾಗಿ ಆಸ್ತಿ ವಶಪಡಿಸಿಕೊಳ್ಳುವ ಯತ್ನ ನಡೆಯುತ್ತಿದೆ ಎಂದು ಮಲ್ಯ ಆರೋಪ ಮಾಡಿದ್ದಾರೆ.

ನ್ಯೂಸ್ ಏಜೆನ್ಸಿ ರೈಟರ್ ಜೊತೆ ಮಾತನಾಡಿದ ಮಲ್ಯ, ಭಾರತದಲ್ಲಿ ಇದು ಚುನಾವಣಾ ವರ್ಷ. ನನ್ನನ್ನು ದೇಶಕ್ಕೆ ವಾಪಸ್ ಕರೆಸಿಕೊಂಡು, ಶಿಕ್ಷೆ ನೀಡಿ ಚುನಾವಣೆಯಲ್ಲಿ ಹೆಚ್ಚು ಮತ ಪಡೆಯುವ ಪ್ರಯತ್ನದಲ್ಲಿದೆ. ಇದಕ್ಕೆ ಎಲ್ಲ ತಯಾರಿ ನಡೆದಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಭಾರತಕ್ಕೆ ವಾಪಸ್ ಆಗಲು ನಾನು ಸಿದ್ಧನಿದ್ದೇನೆ. ಬ್ಯಾಂಕ್ ಸಾಲವನ್ನು ಮರುಪಾವತಿ ಮಾಡುತ್ತೇನೆ. ಆದ್ರೆ ನನ್ನ ಆಸ್ತಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳುವ ಯತ್ನ ಸಹಿಸುವುದಿಲ್ಲ ಎಂದಿದ್ದಾರೆ.

ಬ್ರಿಟನ್ ಕೋರ್ಟ್ ಆಸ್ತಿ ಮುಟ್ಟುಗೋಲಿಗೆ ಆದೇಶ ನೀಡಿದೆ. ಸಮಯ, ದಿನಾಂಕ ನಿಗದಿ ಮಾಡಿದ್ರೆ ನಾನೇ ಬಂದು ನನ್ನ ಬಳಿಯಿರುವ ಆಸ್ತಿಯನ್ನು ನೀಡುತ್ತೇನೆ. ಅದಕ್ಕಿಂತ ಮುಂದೆ ಅಧಿಕಾರಿಗಳು ಬರಲು ಸಾಧ್ಯವಿಲ್ಲ ಎಂದಿದ್ದಾರೆ. ಮೂಲತಃ ಬ್ರಿಟನ್ ನಲ್ಲಿ ಮಲ್ಯ ಹೆಸರಿನಲ್ಲಿ ತುಂಬಾ ಆಸ್ತಿಯಿಲ್ಲ. ಮಲ್ಯ ಕುಟುಂಬಸ್ಥರ ಹೆಸರಿನಲ್ಲಿ ಆಸ್ತಿ ಮಾಡಿದ್ದಾರೆ.

ನಾನು ಬ್ರಿಟನ್ ಗೆ ಓಡಿ ಹೋಗಿಲ್ಲ. ಅಲ್ಲಿನ ಎನ್ ಆರ್ಐ ನಾನು. ಹಾಗಾಗಿ ಅಲ್ಲಿಗೆ ಹೋಗಿದ್ದೇನೆ. ತನಿಖಾ ಸಂಸ್ಥೆಗಳು ಸುಳ್ಳು ಹೇಳ್ತಿವೆ. ನಾನು ಈ ಹಿಂದೆಯೇ ನನ್ನ ಪ್ಲಾನ್ ಕಳುಹಿಸಿದ್ದೆ. ಆದ್ರೆ ಯಾವುದೇ ಉತ್ತರ ದೊರಕಿಲ್ಲ. ತಲೆಮರೆಸಿಕೊಂಡಿದ್ದೇನೆಂದು ಸುಳ್ಳು ಹೇಳಲಾಗ್ತಿದೆ. ನಾನು ಭಾರತಕ್ಕೆ ಬರಲು ಸಿದ್ಧ ಎಂದು ಮಲ್ಯ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...