alex Certify
ಕನ್ನಡ ದುನಿಯಾ       Mobile App
       

Kannada Duniya

ತನ್ನ ಐಷಾರಾಮಿ ನೌಕೆಯ ಸಿಬ್ಬಂದಿಗೂ ಸಂಬಳ ಕೊಟ್ಟಿಲ್ಲ ಮಲ್ಯ

ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ ಬಂಧನ ಭೀತಿಯಲ್ಲಿದ್ದ ವಿಜಯ್ ಮಲ್ಯ ದೇಶ ಬಿಟ್ಟು ಪರಾರಿಯಾಗುವ ಮುನ್ನ, ಕಿಂಗ್ ಫಿಶರ್ ಏರ್ ಲೈನ್ಸ್ ಉದ್ಯೋಗಿಗಳಿಗೆ ವೇತನ ಪಾವತಿಸದೇ ವಿವಾದಕ್ಕೀಡಾಗಿದ್ದರು.

ಸಂಬಳವೇ ಇಲ್ಲದೆ ಕಂಗಾಲಾದ ಕೆಲವರು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾರೆ. ಮಲ್ಯ ಭಾರತ ಬಿಟ್ಟು ಓಡಿ ಹೋದ ಬಳಿಕವೂ ಪರಿಸ್ಥಿತಿಯೇನೂ ಬದಲಾಗಿಲ್ಲ. ವಿಜಯ್ ಮಲ್ಯ ಬಳಿ ಇಂಡಿಯನ್ ಎಂಪ್ರೆಸ್ ಎಂಬ ಸೂಪರ್ ಯಾಚ್ ಇದೆ.

ವಿಶ್ವದಲ್ಲೇ ಅತಿ ದೊಡ್ಡ ಯಾಚ್ ಇದು. ಇದರ ಮೌಲ್ಯ 93 ಮಿಲಿಯನ್ ಡಾಲರ್. ಸದ್ಯ ಲಂಡನ್ ನಲ್ಲಿರೋ ಮಲ್ಯ ಈ ಯಾಚ್ ಸಿಬ್ಬಂದಿಗೆ ಕೂಡ ವೇತನ ಪಾವತಿಸಿಲ್ಲ. ಸೆಪ್ಟೆಂಬರ್ ತಿಂಗಳಿನಿಂದ್ಲೂ ಸುಮಾರು 40 ಸಿಬ್ಬಂದಿಗೆ ಮಲ್ಯ ವೇತನವನ್ನೇ ನೀಡಿಲ್ಲ.

ಸಿಬ್ಬಂದಿಯ ಬಾಕಿ ವೇತನ ಸುಮಾರು 1 ಮಿಲಯನ್ ಡಾಲರ್ ಅಂತಾ ಹೇಳಲಾಗ್ತಿದೆ. ಈ ಬಗ್ಗೆ ಸಿಬ್ಬಂದಿ ದೂರು ನೀಡಿದ್ರು. ಹಾಗಾಗಿ ಅಧಿಕಾರಿಗಳು ಮಲ್ಯಗೆ ಸೇರಿದ ಸೂಪರ್ ಯಾಚ್ ಅನ್ನು ಜಪ್ತಿ ಮಾಡಿದ್ದಾರೆ. ಈ ವಿಹಾರ ನೌಕೆಯ ಇನ್ಷೂರೆನ್ಸ್ ನಿಂದ 6,15,000 ಡಾಲರ್ ಹಣ ಸಿಕ್ಕಿದೆ. ಆದ್ರೆ ಇನ್ನೂ ಕೋಟ್ಯಂತರ ರೂಪಾಯಿ ಬಾಕಿ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...