alex Certify
ಕನ್ನಡ ದುನಿಯಾ       Mobile App
       

Kannada Duniya

‘ಇಂಡಿಯಾ’ ಕೈ ಬಿಡಲು ಮುಂದಾದ ಮಲ್ಯ

mlya-dd

ಲಂಡನ್: ಲಂಡನ್ ನಲ್ಲಿ ನೆಲೆಸಿರುವ ಸಾಲದ ದೊರೆ ವಿಜಯ್ ಮಲ್ಯ ತಮ್ಮ ಒಡೆತನದಲ್ಲಿರುವ ಫಾರ್ಮುಲಾ 1 ರೇಸಿಂಗ್ ತಂಡ ಫೋರ್ಸ್ ಇಂಡಿಯಾದ ಹೆಸರು ಬದಲಿಸಲು ಮುಂದಾಗಿದ್ದಾರೆ.

ಇದರಲ್ಲಿ ಇಂಡಿಯಾ ಹೆಸರನ್ನು ಕೈಬಿಡಲು ಮಲ್ಯ ತೀರ್ಮಾನಿಸಿದ್ದಾರೆ. ಭಾರತದ ವಿವಿಧ ಬ್ಯಾಂಕ್ ಗಳಿಗೆ ಸುಮಾರು 9000 ಕೋಟಿ ರೂ. ಸಾಲ ಪಾವತಿಸಬೇಕಿರುವ ಅವರು ಲಂಡನ್ ನಲ್ಲಿದ್ದು, ತಮ್ಮ ಹೆಸರಲ್ಲಿ 6 ಉದ್ಯಮಗಳನ್ನು ನೋಂದಾಯಿಸಿದ್ದಾರೆ.

ಫಾರ್ಮುಲಾ 1 ತಂಡ ಫೋರ್ಸ್ ಇಂಡಿಯಾ ಹೆಸರನ್ನು ಬದಲಿಸಿ ತಂಡಕ್ಕೆ ಅಂತರರಾಷ್ಟ್ರೀಯ ಮನ್ನಣೆ ನೀಡುವ ಜೊತೆಗೆ ಹೆಚ್ಚು ಪ್ರಾಯೋಜಕರನ್ನು ಆಕರ್ಷಿಸಲು ಯೋಜಿಸಿದ್ದಾರೆ.

ಸದ್ಯ ಭಾರತದಲ್ಲಿ ಗ್ರ್ಯಾನ್ ಪ್ರಿ ನಡೆಯುತ್ತಿಲ್ಲ. ಹಾಗಾಗಿ ಭಾರತೀಯ ಪ್ರಾಯೋಜಕರು ಪ್ರಾಯೋಜಕತ್ವ ವಹಿಸಿಕೊಳ್ಳಲು ಮುಂದಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಮಲ್ಯ ಒಡೆತನದ ಫೋರ್ಸ್ ಇಂಡಿಯಾಕ್ಕೆ ಜಾಗತಿಕ ಮಟ್ಟದಲ್ಲಿ ಪ್ರಾಯೋಜಕರನ್ನು ಆಕರ್ಷಿಸುವ ಸಲುವಾಗಿ ಇಂಡಿಯಾ ಹೆಸರನ್ನು ಕೈ ಬಿಡಲು ತೀರ್ಮಾನಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...