alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತೀಯರ ತೆರಿಗೆ ಹಣದಲ್ಲಿ ದುಬಾರಿ ಮನೆ ಖರೀದಿಸಿದ್ದಾರೆ ಮಲ್ಯ

ಭಾರತದಲ್ಲಿ ಸಾವಿರಾರು ಕೋಟಿ ರೂಪಾಯಿ ವಂಚನೆ ಮಾಡಿ ಲಂಡನ್ ನಲ್ಲಿ ಬಚ್ಚಿಟ್ಟುಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯರ ಒಂದೊಂದೇ ಕರ್ಮಕಾಂಡಗಳು ಬೆಳಕಿಗೆ ಬರ್ತಿವೆ.

ಮಲ್ಯ ಲಂಡನ್ ನಲ್ಲಿ ‘ಲೇಡಿ ವಾಕ್’ ಅನ್ನೋ ಮನೆಯೊಂದನ್ನು ಖರೀದಿಸಿದ್ದಾರೆ. ಈ ಮನೆಯನ್ನು ಮಲ್ಯ ಕೊಂಡುಕೊಂಡಿರೋದು ಭಾರತೀಯರ ತೆರಿಗೆ ಹಣದಿಂದ ಅನ್ನೋದನ್ನು ಬ್ರಿಟನ್ ನ ಸೀರಿಯಸ್ ಫ್ರಾಡ್ ಆಫೀಸ್ ಪತ್ತೆ ಮಾಡಿದೆ. ಈ ಮನೆಗಾಗಿ ಮಲ್ಯ, ಕಿಂಗ್ ಫಿಶರ್ ಏರ್ ಲೈನ್ಸ್ ನ ಎಚ್ ಎಸ್ ಬಿ ಸಿ ಅಕೌಂಟ್ ನಿಂದ 39.7 ಕೋಟಿ ಹಣವನ್ನು ಬ್ರಿಟನ್ ಕಂಪನಿ ಕಾಂಟಿನೆಂಟಲ್ ಅಡ್ಮಿನಿಸ್ಟ್ರೇಟಿವ್ ಸರ್ವೀಸಸ್ ಗೆ ಪಾವತಿಸಿದ್ದಾರೆ.

ಹೆರ್ಟ್ ಫೊರ್ಡ್ ಶೈರ್ ನಲ್ಲಿರೋ ‘ಲೇಡಿ ವಾಕ್’ ಫಾರ್ಮುಲಾ ವನ್ ಚಾಂಪಿಯನ್ ಲ್ಯೂಯಿಸ್ ಹ್ಯಾಮಿಲ್ಟನ್ ಗೆ ಸೇರಿದ್ದಾಗಿತ್ತು. ಸುಮಾರು 9000 ಕೋಟಿಗೂ ಅಧಿಕ ಹಣವನ್ನು ವಂಚಿಸಿದ ಆರೋಪ ಮಲ್ಯ ಮೇಲಿದೆ. ಕಿಂಗ್ ಫಿಶರ್ ಏರ್ ಲೈನ್ಸ್ ನ ಆ್ಯಕ್ಸಿಸ್ ಬ್ಯಾಂಕ್ ಖಾತೆಯಿಂದ ಮಲ್ಯ 242 ಕೋಟಿ ರೂಪಾಯಿಯನ್ನು ಲಂಡನ್ ಅಕೌಂಟ್ ಗೆ ಟ್ರಾನ್ಸ್ ಫರ್ ಮಾಡಿಕೊಂಡಿದ್ದಾರೆ. ಈ ಎಲ್ಲಾ ವಿವರವನ್ನು ಎಸ್ ಎಫ್ ಓ ಸಿಬಿಐಗೆ ನೀಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...