alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತೀಯ ನ್ಯಾಯಾಧೀಶರನ್ನು ಅವಮಾನಿಸಿದ ಮಲ್ಯ ವಕೀಲ

9 ಸಾವಿರ ಕೋಟಿ ಸಾಲ ಮಾಡಿ ದೇಶಬಿಟ್ಟು ಓಡಿ ಹೋಗಿರುವ ಮದ್ಯದ ದೊರೆ ಮಲ್ಯ ಪರ ಲಂಡನ್ ವಕೀಲರು ಭಾರತೀಯ ನ್ಯಾಯಾಧೀಶರಿಗೆ ಅವಮಾನ ಮಾಡಿದ್ದಾನೆ. ಭಾರತದ ಕೋರ್ಟ್ ನಲ್ಲಿರುವ ಕೆಲ ನ್ಯಾಯಾಧೀಶರು ಸರ್ಕಾರದ ಪರವಾಗಿದ್ದಾರೆ. ನಿವೃತ್ತಿ ನಂತ್ರ ಸರ್ಕಾರದ ಉನ್ನತ ಹುದ್ದೆಯಲ್ಲಿ ಸ್ಥಾನ ಸಿಗಲಿ ಎನ್ನುವ ಕಾರಣಕ್ಕೆ ಅವರು ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಭಾರತದ ನ್ಯಾಯಾಧೀಶರಿಗಿಂತ ಪಾಕಿಸ್ತಾನದ ನ್ಯಾಯಾಧೀಶರು ತಟಸ್ಥರಾಗಿದ್ದಾರೆಂದು ಮಲ್ಯ ವಕೀಲರು ಹೇಳಿಕೆ ನೀಡಿದ್ದಾರೆ.

ಸೋಮವಾರ ಲಂಡನ್ ಮೂಲದ ಮಲ್ಯ ವಕೀಲ ಕ್ಲೇರ್ ಮಾಂಟೋಗೊಮರಿ ಹಾಗೂ ಡಾ. ಮಾರ್ಟಿನ್ ಲಾವ್ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಮಲ್ಯ ಪರ ವಾದ ಮಂಡಿಸಿದ್ರು. ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ವಕೀಲರು ಭಾರತೀಯ ಕೋರ್ಟ್ ಗೆ ಅವಮಾನ ಮಾಡುವ ಹೇಳಿಕೆ ನೀಡಿದ್ದಾರೆ.

ಭಾರತದ ಸರ್ವೋಚ್ಛ ನ್ಯಾಯಾಲಯದ ಮೇಲೆ ನಮಗೆ ಗೌರವವಿದೆ. ಆದ್ರೆ ಅಲ್ಲಿನ ಕೆಲ ಪ್ರಕರಣಗಳನ್ನು ನೋಡಿದ್ರೆ ಕೆಲ ನ್ಯಾಯಾಧೀಶರು ಸರ್ಕಾರದ ಪರ ತೀರ್ಪು ನೀಡುತ್ತಾರೆಂಬ ಸಂಶಯ ಮೂಡುತ್ತದೆ. ನಿವೃತ್ತಿ ನಂತ್ರ ಉನ್ನತ ಹುದ್ದೆ ಸಿಗಲಿ ಎನ್ನುವ ಕಾರಣಕ್ಕೆ ಅವರು ಹೀಗೆ ಮಾಡ್ತಾರೆಂಬ ಸಂಶಯವಿದೆ ಎಂದು ವಕೀಲರು ಹೇಳಿದ್ದಾರೆ. ಭಾರತದಲ್ಲಿ ಮಲ್ಯ ವಿಚಾರಣೆ ನ್ಯಾಯಯುತವಾಗಿ ನಡೆಯಲು ಸಾಧ್ಯವಿಲ್ಲ ಎಂದವರು ಹೇಳಿಕೆ ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...