alex Certify
ಕನ್ನಡ ದುನಿಯಾ       Mobile App
       

Kannada Duniya

ಇಂದು ಲಂಡನ್ ಕೋರ್ಟ್ ಮುಂದೆ ವಿಜಯ್ ಮಲ್ಯ

ಬಂಧನದ ನಂತ್ರ ಜಾಮೀನಿನ ಮೇಲೆ ಹೊರಗೆ ಬಂದಿರುವ ಮದ್ಯದ ದೊರೆ ವಿಜಯ್ ಮಲ್ಯ ಡಿಸೆಂಬರ್ 4ರಂದು ಲಂಡನ್ ಕೋರ್ಟ್ ಮುಂದೆ ಹಾಜರಾಗಲಿದ್ದಾರೆ. ಮಲ್ಯ ವಿರುದ್ಧ ಕಪ್ಪುಹಣವನ್ನು ಬಿಳುಪುಗೊಳಿಸಿದ ಆರೋಪವಿದೆ. ಇದೇ ವರ್ಷಾರಂಭದಲ್ಲಿ ಮಲ್ಯನನ್ನು ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ಬಂಧಿಸಿದ್ದರು.

ಬಂಧನದ ನಂತ್ರ 6.50 ಲಕ್ಷ ಪೌಂಡ್ ಜಾಮೀನಿನ ಮೇಲೆ ಮಲ್ಯ ಹೊರಗೆ ಬಂದಿದ್ದರು. ಈ ಪ್ರಕರಣದ ವಿಚಾರಣೆ ಲಂಡನ್ ನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟರ್ ನಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದು ಮಲ್ಯ ಕೋರ್ಟ್ ಮುಂದೆ ಹಾಜರಾಗಲಿದ್ದಾರೆ.

61 ವರ್ಷದ ಮಲ್ಯ ಭಾರತೀಯ ಬ್ಯಾಂಕ್ ಗಳಲ್ಲಿ 9000 ಕೋಟಿ ರೂಪಾಯಿ ಸಾಲ ಮಾಡಿ ದೇಶ ಬಿಟ್ಟಿದ್ದಾರೆ. 2016ರಲ್ಲಿ ಭಾರತದಿಂದ ಲಂಡನ್ ಗೆ ಓಡಿ ಹೋಗಿರುವ ಮಲ್ಯ ಸ್ಕಾಟ್ಲೆಂಡ್ ಪೊಲೀಸ್ ಆರೋಪವನ್ನು ತಳ್ಳಿಹಾಕಿದ್ದಾರೆ. ವಿಚಾರಣೆ ನಡೆಸುವ ಕೋರ್ಟ್ ಭಾರತದ ಒತ್ತಡಕ್ಕೆ ಮಣಿದು ಮಲ್ಯನನ್ನು ಗಡಿಪಾರು ಮಾಡಿ ಭಾರತಕ್ಕೆ ಹಸ್ತಾಂತರಿಸಿದ್ರೆ ಮಲ್ಯನನ್ನು ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿಡಲಾಗುವುದು ಎನ್ನಲಾಗ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...