alex Certify
ಕನ್ನಡ ದುನಿಯಾ       Mobile App
       

Kannada Duniya

ಮಲ್ಯ ವಿಚಾರಣೆ ವೇಳೆ ಕೋರ್ಟ್ ನಲ್ಲಿ ಫೈರ್ ಅಲರಾಂ

ಕಪ್ಪು ಹಣವನ್ನು ಬಿಳಿ ಮಾಡಿದ ಆರೋಪದ ಮೇಲೆ ಬಂಧಿಯಾಗಿ ಜಾಮೀನಿನ ಮೇಲೆ ಹೊರಗೆ ಬಂದಿರುವ ಮದ್ಯದ ದೊರೆ ಮಲ್ಯ ಇಂದು ಲಂಡನ್ ಕೋರ್ಟ್ ಮುಂದೆ ಹಾಜರಾಗಿದ್ದು. ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿದ್ದ ಮಲ್ಯ ವಿಚಾರಣೆ ವೇಳೆ ಉಪಸ್ಥಿತರಿದ್ದರು. ಆದ್ರೆ ಅಚಾನಕ್ ಫೈರ್ ಅಲರಾಂ ಆಗಿದ್ದರಿಂದ ವಿಚಾರಣೆಯನ್ನು ಮಧ್ಯಕ್ಕೆ ನಿಲ್ಲಿಸಬೇಕಾಯ್ತು.

6.50 ಲಕ್ಷ ಪೌಂಡ್ ಜಾಮೀನಿನ ಮೇಲೆ ಜೈಲಿನಿಂದ ಮಲ್ಯ ಹೊರ ಬಂದ ಪ್ರಕರಣ ವಿಚಾರಣೆ ಕೋರ್ಟ್ ನಲ್ಲಿ ನಡೆಯುತ್ತಿತ್ತು. ಈ ವೇಳೆ ಫೈರ್ ಅಲರಾಂ ಆಗಿದೆ. ತಕ್ಷಣ ಕೋರ್ಟ್ ನಲ್ಲಿದ್ದ ಎಲ್ಲರನ್ನೂ ಹೊರಗೆ ಕಳುಹಿಸಲಾಗಿದೆ. ಸುಮಾರು 20 ನಿಮಿಷಗಳ ನಂತ್ರ ಮತ್ತೆ ವಿಚಾರಣೆ ನಡೆದಿದೆ.

ವಿಚಾರಣೆಗೂ ಮುನ್ನ ಮಾತನಾಡಿದ ಮಲ್ಯ ಕೋರ್ಟ್ ಹೇಳಿದಂತೆ ನಡೆಯುತ್ತೇನೆ. ವಿಚಾರಣೆಗೂ ಮುನ್ನ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ. ಈ ಪ್ರಕರಣದ ವಿಚಾರಣೆ ಡಿಸೆಂಬರ್ 14ರವರೆಗೆ ನಡೆಯಲಿದೆ. ವಿಚಾರಣೆ ನಂತ್ರ ಲಂಡನ್ ಕೋರ್ಟ್ ಯಾವ ತೀರ್ಪು ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...