alex Certify
ಕನ್ನಡ ದುನಿಯಾ       Mobile App
       

Kannada Duniya

6 ಸಾವಿರ ರೂಪಾಯಿಗೆ ಕ್ರಿಕೆಟ್ ತಂಡ ಖರೀದಿಸಿದ ಮಲ್ಯ

vijaymallya-rcb1-600-11-1460377645

ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿ ವಿದೇಶಕ್ಕೆ ಪಲಾಯನ ಮಾಡಿರುವ ಮದ್ಯದ ದೊರೆ ವಿಜಯ್ ಮಲ್ಯ ಇದೀಗ ಕೆರಿಬಿಯನ್ ಕ್ರಿಕೆಟ್ ಲೀಗ್ ನಲ್ಲಿ ತಂಡವೊಂದನ್ನು ಖರೀದಿ ಮಾಡಿ ಕುತೂಹಲಕ್ಕೆ ಕಾರಣರಾಗಿದ್ದಾರೆ.

ಹೌದು. ಸಿಪಿಎಲ್ ನ ಬಾಬ್ರೋಡಸ್ ಟ್ರೈಡೆಂಟ್ ತಂಡವನ್ನು ಕೇವಲ 6 ಸಾವಿರ ರೂಪಾಯಿಗಳಿಗೆ ವಿಜಯ್ ಮಲ್ಯ ಖರೀದಿಸಿದ್ದು, ಈ ಕುರಿತು ಈಗಾಗಲೇ ಸಾಕಷ್ಟು ಟೀಕೆಗಳು ಕೇಳಿ ಬಂದಿವೆ.

ಸಾವಿರಾರು ಕೋಟಿ ಸಾಲದ ಹೊರೆ ಹೊತ್ತಿರುವ ಮಲ್ಯ, ಹೊಸ ತ೦ಡ ಖರೀದಿಸಿರುವ ಬಗ್ಗೆ ಬ್ಯಾಂಕುಗಳು ಮತ್ತು ಉದ್ಯಮ ವಲಯದಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದ್ದು ಆದರೆ ಈ ಕುರಿತಾಗಿ ಸ್ಪಷ್ಟನೆ ನೀಡಿರುವ ವಿಜಯ್ ಮಲ್ಯ, ನಾನೇನು ಬೃಹತ್ ಮೊತ್ತ ನೀಡಿ ತಂಡವನ್ನು ಖರೀದಿ ಮಾಡಿಲ್ಲ. ಬದಲಿಗೆ ಬಾರ್ಬೋಡಸ್ ಸರ್ಕಾರದೊಂದಿಗೆ ಮಾತನಾಡಿ ಸರ್ಕಾರದ ನೆರವು ಕೇಳಿದ್ದು ಸರ್ಕಾರದ ನೆರವಿನೊಂದಿಗೆ ತಂಡ ಖರೀದಿಗೆ ಕೇವಲ 6 ಸಾವಿರ ಹಣವನ್ನಷ್ಟೇ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...