alex Certify
ಕನ್ನಡ ದುನಿಯಾ       Mobile App
       

Kannada Duniya

ಮದ್ಯದ ದೊರೆ ವಿಜಯ್ ಮಲ್ಯ ಅರೆಸ್ಟ್

vijay-mallya-arrested

ರಾಷ್ಟ್ರೀಕೃತ ಬ್ಯಾಂಕ್ ಗಳಿಂದ 9000 ಕೋಟಿ ರೂಪಾಯಿ ಸಾಲ ಪಡೆದು ಮರುಪಾವತಿ ಮಾಡದೇ ದೇಶಬಿಟ್ಟು ಓಡಿ ಹೋಗಿದ್ದ ಮದ್ಯದ ದೊರೆ ವಿಜಯ್ ಮಲ್ಯ ಬಂಧನವಾಗಿದೆ. ಲಂಡನ್ ನ ಸ್ಕಾಟ್ಲ್ಯಾಂಡ್ ಯಾರ್ಡ್ನಲ್ಲಿ ಮಲ್ಯ ಬಂಧನವಾಗಿದೆ ಎಂದು ಮೂಲಗಳು ಹೇಳಿವೆ.

ಮಂಗಳವಾರ ಬೆಳಗಿನ ಜಾವ ಮಲ್ಯ ಬಂಧನವಾಗಿದ್ದು, ವೆಸ್ಟ್ ಮಿನ್ಸಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರುಪಡಿಸಲಾಗಿದೆ ಎಂದು ಮೂಲಗಳು ಹೇಳಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಕೋರಿ ಭಾರತ ಲಂಡನ್ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಈ ಮನವಿಯನ್ನು ಸರ್ಕಾರ, ವೆಸ್ಟ್ ಮಿನ್ಸಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಸ್ತಾಂತರಿಸಿತ್ತು. ಮಲ್ಯ ಕೋರ್ಟ್ ಗೆ ಹಾಜರಾಗುವಂತೆ  ಮ್ಯಾಜಿಸ್ಟ್ರೇಟ್ ಕೋರ್ಟ್ ನೊಟೀಸ್ ಜಾರಿ ಮಾಡಿತ್ತು. ಆದ್ರೆ ಮಲ್ಯ ಕೊರ್ಟ್ ಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಲ್ಯ ಬಂಧನಕ್ಕೆ ಆದೇಶ ಹೊರಡಿಸಿತ್ತು.

ಶೀಘ್ರವೇ ಸಿಬಿಐ ತಂಡ ಲಂಡನ್ ಗೆ ತೆರಳಲಿದ್ದು, ಮಲ್ಯ ಹಸ್ತಾಂತರದ ಬಗ್ಗೆ ಮಾತುಕತೆ ನಡೆಸಲಿದೆ. ಶೀಘ್ರವೇ ಭಾರತಕ್ಕೆ ಮಲ್ಯರನ್ನು ಕರೆತರುವ ಸಾಧ್ಯತೆ ಇದೆ. ಈ ಹಿಂದೆ ಪಿಎಂ ಮೋದಿ ಕೂಡ ಆದಷ್ಟು ಬೇಗ ಮಲ್ಯರನ್ನು ಭಾರತಕ್ಕೆ ಕರೆತರುವುದಾಗಿ ಭರವಸೆ ನೀಡಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...