alex Certify
ಕನ್ನಡ ದುನಿಯಾ       Mobile App
       

Kannada Duniya

ಬಂಧಿಸಿದ ಮೂರೇ ಗಂಟೆಯಲ್ಲಿ ಮಲ್ಯಗೆ ಸಿಗ್ತು ಜಾಮೀನು

mallya_calender_1492510570_749x421

ಲಂಡನ್ ನಲ್ಲಿ ಬಂಧನಕ್ಕೊಳಗಾಗಿದ್ದ ಮದ್ಯದ ದೊರೆ ವಿಜಯ್ ಮಲ್ಯಗೆ ಷರತ್ತುಬದ್ಧ ಜಾಮೀನು ಸಿಕ್ಕಿದೆ. ವೆಸ್ಟ್ ಮಿನ್ಸಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮಲ್ಯಗೆ ಜಾಮೀನು ನೀಡಿದೆ.

ಲಂಡನ್ ನ ಸ್ಕಾಟ್ಲ್ಯಾಂಡ್ ಯಾರ್ಡ್ನಲ್ಲಿ ಮಲ್ಯರನ್ನು ಬಂಧಿಸಲಾಗಿತ್ತು. ರಾಷ್ಟ್ರೀಕೃತ ಬ್ಯಾಂಕ್ ಗಳಿಂದ 9000 ಕೋಟಿ ರೂಪಾಯಿ ಸಾಲ ಪಡೆದು ಮರುಪಾವತಿ ಮಾಡದೆ ದೇಶಬಿಟ್ಟು ಓಡಿ ಹೋಗಿದ್ದ ಮದ್ಯದ ದೊರೆಯನ್ನು ವಶಕ್ಕೆ ನೀಡುವಂತೆ ಭಾರತ ಸರ್ಕಾರ ಲಂಡನ್ ಸರ್ಕಾರವನ್ನು ಕೋರಿತ್ತು. ಲಂಡನ್ ಸರ್ಕಾರ ಪ್ರಕರಣವನ್ನು ವೆಸ್ಟ್ ಮಿನ್ಸಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಸ್ತಾಂತರಿಸಿತ್ತು. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮಲ್ಯರನ್ನು ಪೊಲೀಸರು ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಬಂಧಿಸಿ ಮೂರು ಗಂಟೆಯೊಳಗೆ ಮಲ್ಯ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮೇ 17ರಂದು ಹಸ್ತಾಂತರ ಪ್ರಕರಣದ ವಿಚಾರಣೆ ನಡೆಯಲಿದೆ.  ಜಾಮೀನು ಪಡೆದ ನಂತ್ರ ಟ್ವೀಟ್ ಮಾಡಿರುವ ಮಲ್ಯ, ಭಾರತೀಯ ಮಾಧ್ಯಮಗಳು ಉತ್ಪ್ರೇಕ್ಷಿತ ವರದಿ ನೀಡಿವೆ ಎಂದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...