alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮೆ ಹಣಕ್ಕಾಗಿ ಅಂಗವನ್ನೇ ಕಟ್ ಮಾಡಿಸಿಕೊಂಡ್ಲು !

vime

ಹನೋಯ್: ವಿಮೆ ಹಣವನ್ನು ಪಡೆದುಕೊಳ್ಳಲು ಕೆಲವರು ಏನೆಲ್ಲಾ ಖತರ್ನಾಕ್ ಐಡಿಯಾ ಮಾಡುತ್ತಾರೆ ಎಂಬುದರ ಬಗ್ಗೆ ಸಾಮಾನ್ಯವಾಗಿ ಕೇಳಿರುತ್ತೀರಿ. ಇಲ್ಲದ ಅಪಘಾತ, ದುರಂತ ಸಂಭವಿಸಿದೆ ಎಂದು ಹೇಳಿ ಹಣ ಪಡೆದುಕೊಳ್ಳುವ ಬಗ್ಗೆ ಓದಿರುತ್ತೀರಿ.

ಅದೇ ರೀತಿ ವಿಯೆಟ್ನಾಂನಲ್ಲಿ ಮಹಿಳೆಯೊಬ್ಬಳು, ವಿಮೆ ಹಣ ಪಡೆಯುವ ಸಲುವಾಗಿ ತನ್ನ ಕೈಯನ್ನೇ ಕಟ್ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಹನೋಯ್ ನಲ್ಲಿ ವಾಸವಾಗಿರುವ ಲಿ ತಿನ್ ಎನ್ ಎಂಬ 30 ವರ್ಷದ ಮಹಿಳೆ ತನಗೆ ರೈಲು ಗುದ್ದಿ ಅಪಘಾತ ಸಂಭವಿಸಿದೆ ಎಂದು ಇಲ್ಲದ ಕತೆ ಸೃಷ್ಠಿಸಿ 1.50 ಲಕ್ಷ ಡಾಲರ್ ವಿಮೆ ಹಣ ಪಡೆಯಲು ಸಂಚು ರೂಪಿಸಿದ್ದಾಳೆ. ಇದಕ್ಕಾಗಿ ತನ್ನ ಫ್ರೆಂಡ್ ಗೆ ಹಣ ಕೊಟ್ಟು ತನ್ನ ಕೈಯನ್ನೇ ಕತ್ತರಿಸಿಕೊಂಡಿದ್ದಾಳೆ.

ವಿಮೆ ಕಂಪನಿಯವರು ಈಕೆಯ ನಡೆಯಿಂದ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು, ತನಿಖೆ ನಡೆಸಿದ ಸಂದರ್ಭದಲ್ಲಿ ವಿಮೆ ಹಣಕ್ಕಾಗಿ ತಾನೇ ಕೈ ಕಟ್ ಮಾಡಿಸಿಕೊಂಡು, ರೈಲಿನ ಕತೆ ಕಟ್ಟಿದ್ದಾಳೆ ಎಂಬುದು ಗೊತ್ತಾಗಿದೆ. ಆಕೆಯೀಗ ಜೈಲು ಸೇರುವಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...