alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡಿದ್ರೆ ದಂಡ ಗ್ಯಾರಂಟಿ

internet_story_222_1497087304_749x421

ದಿನದಿಂದ ದಿನಕ್ಕೆ ಸಾಮಾಜಿಕ ಜಾಲತಾಣ ಬಳಸುವವರ ಸಂಖ್ಯೆ ಹೆಚ್ಚಾಗ್ತಾನೆ ಇದೆ. ಜೊತೆಗೆ ಹೊಸ ಹೊಸ ಸಮಸ್ಯೆಗಳು ಇದ್ರಿಂದ ಹುಟ್ಟಿಕೊಳ್ತಾ ಇವೆ. ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಶಬ್ಧ ಬಳಸಿ ನಿಂದನೆ ಮಾಡುವುದು ಹೆಚ್ಚಾಗಿದೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ವಿಯೆಟ್ನಾಂ ಸರ್ಕಾರ ಮಹತ್ವ ನಿರ್ಧಾರ ಕೈಗೊಂಡಿದೆ.

ಸಾಮಾಜಿಕ ಜಾಲತಾಣದಲ್ಲಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ವಿರುದ್ಧ ನಿಂದನೆ ಮಾಡುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ವಿಯೆಟ್ನಾಂ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ನೀಡುವ, ಸಂಘ ಸಂಸ್ಥೆಯ ಹೆಸರನ್ನು ಹಾಳು ಮಾಡುವ, ವ್ಯಕ್ತಿಯ ಘನತೆ, ಗೌರವಕ್ಕೆ ಧಕ್ಕೆ ತರುವ ವಿಷಯಗಳನ್ನು ಹಂಚಿಕೊಂಡವರ ವಿರುದ್ಧ 30-50 ಮಿಲಿಯನ್ ವಿಯೆಟ್ನಾಮೀಸ್ ಡಾಂಗ್ ದಂಡ ವಿಧಿಸಲಾಗುವುದು.

ಅಶ್ಲೀಲ ಶಬ್ಧಗಳ ಬಳಕೆ, ಗುಪ್ತ ವಿಚಾರಗಳ ಸೋರಿಕೆ, ವಿಯೆಟ್ನಾಂ ಸಂಪ್ರದಾಯಗಳಿಗೆ ಧಕ್ಕೆತರುವಂತ ಕೆಲಸ ಮಾಡಿದವರೂ ದಂಡ ತೆರಬೇಕಾಗುತ್ತದೆ. ನಕಲಿ ಖಾತೆ ಸೃಷ್ಟಿಸಿದವರೂ ಈ ಅಪರಾಧಿಗಳ ಪಟ್ಟಿಯಲ್ಲಿ ಬರಲಿದ್ದಾರೆ. ವಿಯೆಟ್ನಾಂ ಹೊಸ ಆದೇಶದ ಪ್ರಕಾರ ಬಳಕೆದಾರರ ವೈಯಕ್ತಿಕ ಮಾಹಿತಿ ಅಥವಾ ಅವರ ಫೋಟೋಗಳನ್ನು ಅವರ ಒಪ್ಪಿಗೆಯಿಲ್ಲದೆ ಬಳಸಿ ಸುಳ್ಳು ಖಾತೆ ರಚಿಸಿದಲ್ಲಿ ಅವರಿಗೆ 10-12 ಮಿಲಿಯನ್ ವಿಯೇಟ್ನಾಮೀಸ್ ಡಾಂಗ್ ದಂಡ ವಿಧಿಸಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...