alex Certify
ಕನ್ನಡ ದುನಿಯಾ       Mobile App
       

Kannada Duniya

9ನೇ ಮಹಡಿಯಿಂದ 2 ಬಾರಿ ಬಿದ್ರೂ ಬದುಕುಳಿದ ಮಹಿಳೆ

9ನೇ ಮಹಡಿಯಿಂದ ಎರಡು ಬಾರಿ ಬಿದ್ರೂ ಮಹಿಳೆ ಪವಾಡ ಸದೃಶ ರೀತಿಯಲ್ಲಿ ಬದುಕಿ ಉಳಿದಿದ್ದಾಳೆ. ಡಿಸೆಂಬರ್ 7ರಂದು ಉತ್ತರ ಚೀನಾದಲ್ಲಿರೋ ಯನ್ಶೌ ಹೋಟೆಲ್ ನಲ್ಲಿ ಈ ಅವಘಡ ಸಂಭವಿಸಿದೆ. 9ನೇ ಮಹಡಿ ಮೇಲಿಂದ ಮಹಿಳೆ ಕೆಳಗೆ ಬೀಳಲು ಕಾರಣ ಏನು ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ.

ಮೊದಲು 9ನೇ ಮಹಡಿಯಿಂದ ಕೆಳಕ್ಕೆ ಬಿದ್ದ ಮಹಿಳೆ 2ನೇ ಮಹಡಿಯಲ್ಲಿರೋ ಗೋಡೆ ಬದಿಯಲ್ಲಿ ಸಿಕ್ಕಿಹಾಕಿಕೊಂಡಿದ್ಲು. ಬಿದ್ದ ರಭಸಕ್ಕೆ ಆಕೆಗೆ ಗಾಯವಾಗಿದೆ, ಆದ್ರೆ ಪ್ರಾಣ ಉಳಿದಿದೆ. ಅಲ್ಲಿಂದ ನಿಧಾನವಾಗಿ ತೆವಳಿಕೊಂಡು ಅಂಚಿಗೆ ಬಂದ ಆಕೆ ಮತ್ತೆ ಕೆಳಕ್ಕೆ ಬಿದ್ದಿದ್ದಾಳೆ.

ಕೆಳಗೆ ನಿಂತಿದ್ದ ಜನರು ಅವಳನ್ನು ಹಿಡಿದುಕೊಳ್ಳಲು ರೆಡಿಯಾಗಿದ್ರು. ಎಲ್ಲರೂ ಸೇರಿ ಅವಳನ್ನು ಕ್ಯಾಚ್ ಮಾಡಿದ್ದಾರೆ. ರಕ್ಷಣಾ ಸಿಬ್ಬಂದಿ ಕೂಡ ಆಂಬ್ಯುಲೆನ್ಸ್ ಸಮೇತ ಹಾಜರಾಗಿದ್ರು. ಕೂಡಲೇ ಅವಳನ್ನು ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಪ್ರತ್ಯಕ್ಷದರ್ಶಿಯೊಬ್ಬ ಈ ಘಟನೆಯನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾನೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...