alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರೆಜಿಲ್ ನಲ್ಲಿ ನಿರಾಶ್ರಿತರಿಗೆ ಉಚಿತ ಯೋಗ ತರಬೇತಿ

yoga

ಸಾವಿರಾರು ವರ್ಷಗಳಿಂದ್ಲೂ ಭಾರತದಲ್ಲಿ ಆಚರಣೆಯಲ್ಲಿರುವ ಯೋಗ ಈಗ ವಿದೇಶಗಳಲ್ಲಿ ಸಾಕಷ್ಟು ಜನಪ್ರಿಯವಾಗಿದೆ. ಮಾನಸಿಕ, ದೈಹಿಕ ಆರೋಗ್ಯ ಕಾಯ್ದುಕೊಳ್ಳಲು ಯೋಗ ಅತ್ಯಂತ ಅವಶ್ಯಕ ಅನ್ನೋದು ಪ್ರತಿಯೊಬ್ಬರಿಗೂ ಅರ್ಥವಾಗಿದೆ.

ಆದ್ರೆ ಕಡುಬಡವರು, ನಿರಾಶ್ರಿತರಿಗೆ ಯೋಗ ತರಬೇತಿ ಪಡೆಯಲು ಸಾಧ್ಯವಾಗುತ್ತಿಲ್ಲ, ಯೋಗ ತರಗತಿಗಳಿಗೆ ಹೋಗಲು ಹಣವಿಲ್ಲ. ಅಂಥವರಿಗಾಗಿಯೇ ಬ್ರೆಜಿಲ್ ನಲ್ಲಿ ಸ್ವಯಂ ಸೇವಕರು ಯೋಗಾಭ್ಯಾಸ ಹಮ್ಮಿಕೊಂಡಿದ್ದಾರೆ.

ಬ್ರೆಜಿಲ್ ನ ರಿಯೋ ಡಿ ಜನೆರಿಯೋದಲ್ಲಿ ವಾರದಲ್ಲಿ ಮೂರು ದಿನ ಸೋಮವಾರ, ಬುಧವಾರ ಮತ್ತು ಗುರುವಾರ ನಿರಾಶ್ರಿತರಿಗೆ ಉಚಿತವಾಗಿ ಯೋಗಾಸನವನ್ನು ಹೇಳಿಕೊಡಲಾಗುತ್ತಿದೆ. ಸಂಘರ್ಷದ ಜೀವನ ನಡೆಸ್ತಾ ಇರೋ ನಿರಾಶ್ರಿತರಿಗೆ ಯೋಗಾಭ್ಯಾಸ ಮಾಡಿಸ್ತಾ ಇರೋದು ಸ್ವಯಂಸೇವಕರಿಗೆ ಖುಷಿ ಕೊಟ್ಟಿದೆ.

ವಿಶೇಷ ಅಂದ್ರೆ ನಿರಾಶ್ರಿತರು ಮತ್ತು ಭಿಕ್ಷುಕರು ಕೂಡ ಯೋಗದ ಬಗ್ಗೆ ಅಪಾರ ಆಸಕ್ತಿ ತೋರುತ್ತಿದ್ದಾರೆ. ಯೋಗ ತರಬೇತಿಗೆ ಸುಮಾರು 60 ಕ್ಕೂ ಹೆಚ್ಚು ಜನ ಆಗಮಿಸಿ, ಆಸನಗಳನ್ನು ಕಲಿಯುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...