alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರಾಫಿಕ್ ಕಿರಿಕಿರಿಗೆ ಬೇಸತ್ತ ಕಾರು ಚಾಲಕನ ಕೋಪ ನೋಡಿದ್ರಾ…?

ಟ್ರಾಫಿಕ್ ನಲ್ಲಿ ಕಾಯೋ ಕಷ್ಟ ಇದೆಯಲ್ಲಾ ಅದು ಸಾಮಾನ್ಯವಲ್ಲ. ಮನುಷ್ಯನ ತಾಳ್ಮೆಯನ್ನು ಪರೀಕ್ಷೆ ಮಾಡುವಂತಾ ಟ್ರಾಫಿಕ್ ಸಿಗ್ನಲ್ ಗಳು ವಿದೇಶಗಳಲ್ಲೂ ಸಾಕಷ್ಟಿವೆ. ಇಂತಾ ಒಂದು ಟ್ರಾಫಿಕ್ ಸಿಗ್ನಲ್ ನಿಂದ ಬೇಸತ್ತ ವ್ಯಕ್ತಿಯೊಬ್ಬ ಟ್ರಾಫಿಕ್ ದೀಪಗಳನ್ನೇ ಧ್ವಂಸ ಮಾಡಿದ ಘಟನೆ ಚೀನಾದ ತೇಂನ್ಜಿನ್ ಪ್ರಾಂತ್ಯದಲ್ಲಿ ನಡೆದಿದೆ.

ಕೆಲ ನಿಮಿಷಗಳ ಕಾಲ ಟ್ರಾಫಿಕ್ ನಲ್ಲಿ ತಾಳ್ಮೆಯಿಂದ ಕಾದ ವ್ಯಕ್ತಿ ತನ್ನ ಕಾರಿನಿಂದ ಇಳಿದು ಬಂದು ಒಂದೇ ಕೈನಲ್ಲಿ ಟ್ರಾಫಿಕ್ ಸಿಗ್ನಲ್ ದೀಪಗಳನ್ನ ನೆಲಕ್ಕೆ ಬೀಳಿಸ್ತಾನೆ. ಈ ವಿಡಿಯೋ ಸಿಸಿ ಟಿವಿಯಲ್ಲಿ ದಾಖಲಾಗಿದೆ.

ಆ ವ್ಯಕ್ತಿ ಎಷ್ಟು ಹೊತ್ತು ಟ್ರಾಫಿಕ್ ನಲ್ಲಿ ಕಾಯುತ್ತಿದ್ದ ಅನ್ನೋ ಮಾಹಿತಿ ತಿಳಿದುಬಂದಿಲ್ಲ. ಆದ್ರೆ ಆತ ಟ್ರಾಫಿಕ್ ನಿಂದಾಗಿಯೇ ಕೋಪಗೊಂಡಿದ್ದ ಅನ್ನೋದು ಅವನ ಆಕ್ಷನ್ ನಲ್ಲಿ ಸಾಬೀತಾಗ್ತಿದೆ. ಸಾರ್ವಜನಿಕ ಆಸ್ತಿಯನ್ನು ಹಾನಿ ಮಾಡಿದ ಹಿನ್ನಲೆಯಲ್ಲಿ ಆ ವ್ಯಕ್ತಿಗೆ ಪೊಲೀಸರು ಫೈನ್ ಹಾಕಿದ್ದು ಐದು ದಿನಗಳ ಕಾಲ ಬಂಧನಕ್ಕೊಳಗಾಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...