alex Certify
ಕನ್ನಡ ದುನಿಯಾ       Mobile App
       

Kannada Duniya

ಕಳ್ಳನ ಮೇಲೆ ಮುಗಿಬಿದ್ರು ನಾಲ್ವರು ಮಹಿಳೆಯರು

ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿರೋ ರೆಸ್ಟೋರೆಂಟ್ ನಲ್ಲಿ ನಾಲ್ವರು ಮಹಿಳೆಯರು ದರೋಡೆಕೋರನ ಬೆಂಡೆತ್ತಿದ್ದಾರೆ. ಗ್ರಾಹಕನ ಸೋಗಿನಲ್ಲಿ ಕಳ್ಳ ರೆಸ್ಟೋರೆಂಟ್ ಗೆ ನುಗ್ಗಿದ್ದ. ಕ್ಯಾಶ್ ಬಾಕ್ಸ್ ನಲ್ಲಿದ್ದ ಹಣ ಎಗರಿಸಲು ಮುಂದಾಗಿದ್ದಾನೆ. ಆದ್ರೆ ರೆಸ್ಟೋರೆಂಟ್ ನ ನಾಲ್ವರು ಸಿಬ್ಬಂದಿ ಅದಕ್ಕೆ ಅವಕಾಶವನ್ನೇ ಕೊಡಲಿಲ್ಲ.

ಅವನನ್ನು ಸುತ್ತುವರಿದು ತೀವ್ರ ಪ್ರತಿರೋಧ ತೋರಿದ್ರು. ಅಷ್ಟೇ ಅಲ್ಲ ಮಹಿಳೆಯರ ಪವರ್ ಏನು ಅನ್ನೋದನ್ನು ತೋರಿಸಿಕೊಟ್ರು. ಇಬ್ಬರು ಸರಿಯಾಗಿ ದರೋಡೆಕೋರನ ತಲೆ ಮೇಲೆ ಬಾರಿಸಿದ್ರು. ನಾಲ್ಕಾರು, ಪಂಚ್ ಕಿಕ್ ಕೊಟ್ಟು ಅವನನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ರು.

ಹಣವೂ ಬೇಡ ಏನೂ ಬೇಡ ಹೇಗಾದ್ರೂ ಪ್ರಾಣ ಉಳಿಸಿಕೊಂಡ್ರೆ ಸಾಕು ಅಂತಾ ಖದೀಮ ಕೊನೆಗೆ ಅಲ್ಲಿಂದ ಓಡಿ ಹೋದ. ಆ ಗ್ಯಾಪ್ ನಲ್ಲೇ ಹೇಗೋ 30 ಡಾಲರ್ ಹಣ ಕೂಡ ಎಗರಿಸಿದ್ದಾನೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ವಿಡಿಯೋವನ್ನು ರಿಲೀಸ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...