alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಕಳ್ಳನ ಖತರ್ನಾಕ್ ಐಡಿಯಾ

ಚೀನಾದ ಡೊಂಗ್ಗುವಾನ್ ನಗರದ ಆಭರಣದ ಅಂಗಡಿಯಲ್ಲಿ ಭಾರಿ ಪ್ರಮಾಣದಲ್ಲಿ ಕಳ್ಳತನ ನಡೆದಿದೆ. ಸುಮಾರು 53 ಸಾವಿರ ಡಾಲರ್ ಮೌಲ್ಯದ ಚಿನ್ನಾಭರಣ ಕದ್ದು ಕಳ್ಳ ಪರಾರಿಯಾಗಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಚಿನ್ನಾಭರಣ ಕಳ್ಳತನ ಮಾಡುವುದಕ್ಕಿಂತ ಹೆಚ್ಚಾಗಿ, ಅಂಗಡಿ ಶೆಟರ್ ತೆಗೆಯಲು ಆತ ಬಳಸಿದ ವಿಧಾನ ನಿಜಕ್ಕೂ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.

ಈ ಖತರ್ನಾಕ್ ಕಳ್ಳ ಆಭರಣದ ಅಂಗಡಿ ಮುಂದೆಯೇ ಮಲಗಿರುವಂತೆ ನಾಟಕ ಮಾಡಿದ. ಮಧ್ಯರಾತ್ರಿ ರಸ್ತೆ ನಿರ್ಜನವಾಗಿದ್ದಾಗ, ತನ್ನನ್ನು ಯಾರಾದರೂ ಗಮನಿಸುತ್ತಿದ್ದಾರಾ ಅಂತಾ ಮತ್ತೊಮ್ಮೆ ನೋಡಿಕೊಂಡಿದ್ದಾನೆ. ನಂತರ ಮಲಗಿದಂತೆಯೇ ಇದ್ದು ನಿಧಾನವಾಗಿ ಅಂಗಡಿಯ ಶೆಟರ್ ಗಳನ್ನು ತನ್ನ ಕೈಗಳಿಂದ ಅದುಮಿ, ಸ್ವಲ್ಪ ಮೇಲಕ್ಕೆತ್ತಿ ಅದರೊಳಗೆ ತೂರಿಕೊಂಡು ಅಂಗಡಿಯೊಳಗೆ ನುಗ್ಗಿದ್ದಾನೆ.

ತಕ್ಷಣವೇ ಅಲ್ಲಿದ್ದ ಪ್ಲಾಸ್ಟಿಕ್ ಬ್ಯಾಗ್ ನಿಂದ ತನಗೆ ಬೇಕಾದ ನೆಕ್ಲೇಸ್ ಗಳು, ಕಿವಿಯೋಲೆ, ವಜ್ರದುಂಗುರಗಳು, ತೆಗೆದುಕೊಂಡ ಆತ ಬಂದ ಜಾಗದಿಂದಲೇ ತೆರಳಿದ್ದಾನೆ. ಮಳಿಗೆ ಮಾಲಿಕ ಮಾರನೆ ದಿನ ಬಂದಾಗ ತನ್ನ ಅಂಗಡಿಯಲ್ಲಿ ಕಳ್ಳತನ ನಡೆದಿದ್ದು ಬೆಳಕಿಗೆ ಬಂದಿದೆ. ಕಳ್ಳತನವಾದ ಆಭರಣಗಳ ಒಟ್ಟು ಅಂದಾಜು ಮೌಲ್ಯ 53 ಸಾವಿರ ಡಾಲರ್ ಗಳಾಗಿವೆ ಎಂದು ತಿಳಿದು ಬಂದಿದೆ. ಆರೋಪಿಯನ್ನು ಹುಡುಕಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...