alex Certify
ಕನ್ನಡ ದುನಿಯಾ       Mobile App
       

Kannada Duniya

ನಡು ರಸ್ತೆಯಲ್ಲೇ ಬಾಲಕನ ಬಿಂದಾಸ್ ಸ್ಟೆಪ್

ಸೌದಿ ಅರೇಬಿಯಾದ ಜೆಡ್ಡಾದಲ್ಲಿ 14 ವರ್ಷದ ಬಾಲಕನೊಬ್ಬ ನಡು ರಸ್ತೆಯಲ್ಲೇ ಡಾನ್ಸ್ ಮಾಡಿದ ತಪ್ಪಿಗೆ ಅರೆಸ್ಟ್ ಆಗಿದ್ದಾನೆ. ಟಿ ಶರ್ಟ್ ಹಾಗೂ ಶಾರ್ಟ್ಸ್ ತೊಟ್ಟಿದ್ದ ಹುಡುಗ, 90ರ ದಶಕದ ಮಕರೆನಾ ಹಾಡಿಗೆ ಟ್ರಾಫಿಕ್ ಸಿಗ್ನಲ್ ಮಧ್ಯೆ ನಿಂತು ಸೊಂಟ ಬಳುಕಿಸಿದ್ದಾನೆ.

ಬಾಲಕ ಸಾರ್ವಜನಿಕ ಸ್ಥಳದಲ್ಲಿ ಅಸಂಬದ್ಧವಾಗಿ ವರ್ತಿಸಿದ್ದಾನೆ ಅನ್ನೋ ಕಾರಣಕ್ಕೆ ಪೊಲೀಸರು ಅವನನ್ನು ಬಂಧಿಸಿ ವಿಚಾರಣೆ ಮಾಡ್ತಿದ್ದಾರೆ. ಬಾಲಕನ ಡಾನ್ಸ್ ವಿಡಿಯೋ ವೈರಲ್ ಆಗಿದ್ದು, ಸಾವಿರಾರು ಲೈಕ್ಸ್ ಬಂದಿವೆ. ಹೆಡ್ ಫೋನ್ ಹಾಕಿಕೊಂಡಿದ್ದ ಹುಡುಗ ಟ್ರಾಫಿಕ್ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ನಡು ರಸ್ತೆಯಲ್ಲಿ ನಿಂತು ಡೋಂಟ್ ಕೇರ್ ಧೋರಣೆ ತೋರಿದ್ದಾನೆ. ಸಾಲು ಸಾಲು ವಾಹನಗಳು ನಿಂತಿದ್ರೂ ಹಿಂದೆ ಮುಂದೆ ಯೋಚಿಸದೇ ಒಂದೇ ಸಮನೆ ಕುಣಿದಿದ್ದಾನೆ. ಪೊಲೀಸರು ಬಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರಾ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...