alex Certify
ಕನ್ನಡ ದುನಿಯಾ       Mobile App
       

Kannada Duniya

ವೈಟ್ ಡಾಕ್ಟರ್ ಬೇಕೆಂದು ಪಟ್ಟು ಹಿಡಿದ ಮಹಿಳೆ

doct-kenada

ತುರ್ತು ಚಿಕಿತ್ಸೆ ಅವಶ್ಯಕತೆ ಇದ್ದ ಸಂದರ್ಭದಲ್ಲಿ ವೈದ್ಯರು ಸಕಾಲಕ್ಕೆ ಚಿಕಿತ್ಸೆ ನೀಡಿದರೆ ಸಾಕು ಎನ್ನುವವರ ನಡುವೆ ಕೆನಡಾದ ಮಹಿಳೆಯೊಬ್ಬಳು ಬಿಳಿ ವೈದ್ಯನಿಂದಲೇ ಚಿಕಿತ್ಸೆ ಕೊಡಿಸಬೇಕೆಂದು ಪಟ್ಟು ಹಿಡಿದಿದ್ದಾಳೆ.

ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಪುತ್ರನನ್ನು ಒಂಟಾರಿಯೋದ ಮಿಸ್ಸಿಸೋಗದಲ್ಲಿರುವ ಆಸ್ಪತ್ರೆಯೊಂದಕ್ಕೆ ಕರೆತಂದಿದ್ದ ಮಹಿಳೆಯೊಬ್ಬಳು ಆತನಿಗೆ ಚಿಕಿತ್ಸೆ ನೀಡಲು ಬಿಳಿ ವೈದ್ಯರೇ ಬೇಕೆಂದು ಕೇಳಿದ್ದಾಳೆ.

ಆಸ್ಪತ್ರೆಯ ಸಿಬ್ಬಂದಿ ಡ್ಯೂಟಿಯಲ್ಲಿರುವ ವೈದ್ಯರು ಚಿಕಿತ್ಸೆ ನೀಡುತ್ತಾರೆ. ನಿಮ್ಮ ಬೇಡಿಕೆಯಂತೆ ಬಿಳಿ ವೈದ್ಯರನ್ನೇ ಕರೆಸಲು ಸಾಧ್ಯವಿಲ್ಲ ಎಂದಾಗ ಮಹಿಳೆ ಜೋರಾಗಿ ಕೂಗಾಡಿದ್ದಾಳೆ. ಕಂದು ಬಣ್ಣದ ವೈದ್ಯರು ಬೇಡ, ಬಿಳಿ ವೈದ್ಯರೇ ಬೇಕೆಂದು ಪಟ್ಟು ಹಿಡಿದಿದ್ದು, ಈ ದೃಶ್ಯಗಳೆಲ್ಲಾ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಮಹಿಳೆ ಹೀಗೆ ಬಣ್ಣ ನೋಡಿ ಡಾಕ್ಟರ್ ಬಯಸಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...