alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಎದೆ ಝಲ್ಲೆನಿಸುವ ವಿಡಿಯೋ

lion-cand

ಕೆನಡಾದ ಕರಾವಳಿಯಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಸಮುದ್ರ ಸಿಂಹ(Sea Lion) ಹುಡುಗಿಯೊಬ್ಬಳನ್ನು ಎಳೆದೊಯ್ಯಲೆತ್ನಿಸಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೋಡುಗರ ಎದೆ ಝಲ್ಲೆನಿಸುವಂತಿದೆ.

ಕೆನಡಾದ ಪಶ್ಚಿಮ ಕರಾವಳಿಯಲ್ಲಿರುವ ಸ್ಟೀವೆಸ್ಟನ್ ನಲ್ಲಿ ಪ್ರವಾಸಿಗರು ಸೇರಿದ್ದ ಸಂದರ್ಭದಲ್ಲಿ ಸಮುದ್ರ ಸಿಂಹಕ್ಕೆ ಆಹಾರದ ತುಂಡು ಎಸೆದಿದ್ದಾರೆ.

ಅದನ್ನು ತಿಂದ ಸಿಂಹ ನೀರಿನ ಮೇಲ್ಭಾಗದ ಕಟ್ಟೆಯ ಮೇಲೆ ಕುಳಿತಿದ್ದ ಹುಡುಗಿಯ ಹಿಂಭಾಗಕ್ಕೆ ಬಾಯಿ ಹಾಕಿ ಎಳೆದೊಯ್ದಿದೆ. ಕೂಡಲೇ ಅಲ್ಲಿದ್ದ ವ್ಯಕ್ತಿಯೊಬ್ಬ ನೀರಿಗೆ ಹಾರಿ ಆಕೆಯನ್ನು ಪಾರು ಮಾಡಿದ್ದಾನೆ.

ಕೆಲ ಕಾಲ ಆಕೆಯ ಕುಟುಂಬದವರು ಹಾಗೂ ಅಲ್ಲಿದ್ದವರು ಆತಂಕಕ್ಕೆ ಒಳಗಾಗಿದ್ದರು. ಅದೃಷ್ಟವಶಾತ್ ಯಾವುದೇ ಹಾನಿಯಾಗಿಲ್ಲ. ಈ ದೃಶ್ಯಗಳೆಲ್ಲವನ್ನು ಸೆರೆ ಹಿಡಿದ ಮೈಕೆಲ್ ಫ್ಯುಜಿವಾರ ಯು ಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ದು, ಮಿಲಿಯನ್ ಗಟ್ಟಲೇ ವೀಕ್ಷಣೆಯಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...