alex Certify
ಕನ್ನಡ ದುನಿಯಾ       Mobile App
       

Kannada Duniya

25 ಅಡಿ ಮೇಲಿನಿಂದ ಬಿದ್ದವಳನ್ನು ಹಿಡಿಯಲು ಸೇರಿದ್ರು ಜನ

woman-falling_650x400_41498445641

ನ್ಯೂಯಾರ್ಕ್ ನ ಅಮ್ಯೂಸ್ಮೆಂಟ್ ಪಾರ್ಕ್ ಒಂದರಲ್ಲಿ ಬಾಲಕಿ 25 ಅಡಿ ಎತ್ತರದಿಂದ ಬಿದ್ರೂ ಬಚಾವ್ ಆಗಿದ್ದಾಳೆ. ಪಾರ್ಕ್ ನಲ್ಲಿದ್ದ ಜನರೇ ಅವಳನ್ನು ಕ್ಯಾಚ್ ಹಿಡಿದು ಕಾಪಾಡಿದ್ದಾರೆ. ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ.

ನೀಲಿ ಬಣ್ಣದ ಶಾರ್ಟ್ಸ್ ಹಾಗೂ ಬೂದು ಬಣ್ಣದ ಟಿ-ಶರ್ಟ್ ಧರಿಸಿದ್ದ ಬಾಲಕಿ 25 ಅಡಿ ಎತ್ತರದಲ್ಲಿ ರೈಡ್ ಮಾಡ್ತಾ ಇದ್ಲು. ಇದ್ದಕ್ಕಿದ್ದಂತೆ ಬ್ಯಾಲೆನ್ಸ್ ತಪ್ಪಿದ್ರಿಂದ ಆಕೆ ಸಹಾಯಕ್ಕಾಗಿ ಕೂಗಿಕೊಂಡಿದ್ದಾಳೆ. ಕೂಡಲೇ ಪಾರ್ಕ್ ನಲ್ಲಿದ್ದವರೆಲ್ಲ ಬಾಲಕಿ ಇದ್ದ ಜಾಗದ ಕೆಳಕ್ಕೆ ಬಂದು ನಿಂತ್ರು.

ಎಲ್ಲರೂ ಜೊತೆಯಾಗಿ ಕೈಗಳನ್ನು ನೀಡಿ ಅವಳನ್ನು ಕ್ಯಾಚ್ ಮಾಡಿದ್ದಾರೆ. ಆದ್ರೆ ಕೆಳಕ್ಕೆ ಬೀಳುವ ಮುನ್ನ ಮರದ ಕೊಂಬೆ ತಗುಲಿದ್ದರಿಂದ ಬಾಲಕಿಗೆ ಕೊಂಚ ಗಾಯವಾಗಿದೆ. ತನ್ನ ಕುಟುಂಬದವರ ಜೊತೆ ಬಾಲಕಿ ಪಾರ್ಕ್ ಗೆ ಬಂದಿದ್ಲು. ಕುಟುಂಬದ ಇತರ ಸದಸ್ಯರು ಕೂಡ ರೈಡ್ ನಲ್ಲಿ ಭಾಗವಹಿಸಿದ್ರು.

ಬಾಲಕಿ ಸುಮಾರು 90 ನಿಮಿಷಗಳ ಕಾಲ ಮೇಲ್ಭಾಗದಲ್ಲೇ ನೇತಾಡುತ್ತಿದ್ಲು. ಎಲ್ಲರೂ ಧೈರ್ಯ ತುಂಬಿದ್ದರಿಂದ ಕೈಬಿಟ್ಟು, ಕೆಳಕ್ಕೆ ಬಿದ್ದಿದ್ದಾಳೆ. ಬಾಲಕಿಯನ್ನು ಹಿಡಿಯಲು ಪ್ರಯತ್ನಿಸಿದ 47 ವರ್ಷದ ವ್ಯಕ್ತಿಗೆ ಕೂಡ ಕೊಂಚ ಗಾಯಗಳಾಗಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...