alex Certify
ಕನ್ನಡ ದುನಿಯಾ       Mobile App
       

Kannada Duniya

ರೋಗಿಯ ಪ್ರಾಣ ಹೋಗುವಾಗ ನಗುತ್ತಿದ್ರು ನರ್ಸ್ ಗಳು..!

ವೈರಲ್ ಆಗಿರೋ ವಿಡಿಯೋ ಒಂದರಲ್ಲಿ ನರ್ಸ್ ಗಳ ಕ್ರೌರ್ಯ ಬೆಳಕಿಗೆ ಬಂದಿದೆ. ಎರಡನೇ ವಿಶ್ವಯುದ್ಧದಲ್ಲಿ ಹೋರಾಡಿದ್ದ ವ್ಯಕ್ತಿಯೊಬ್ಬ ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ, ಆತ ಉಸಿರಾಡಲಾಗದೆ ಒದ್ದಾಡುತ್ತಿದ್ದ, ಆಕ್ಸಿಜನ್ ಮಾಸ್ಕ್ ಹಾಕುವಂತೆ ಬೇಡಿಕೊಳ್ತಿದ್ದ.

ಆದ್ರೆ ನರ್ಸ್ ಗಳು ಮಾತ್ರ ಒಂದೇ ಸಮನೆ ನಗುತ್ತ ಲೇವಡಿ ಮಾಡಿದ್ದಾರೆ. 2014ರ ಫೆಬ್ರವರಿ 27ರಂದು ನಡೆದ ಘಟನೆ ಇದು. ಜೇಮ್ಸ್ ಡೆಂಪ್ಸಿ ಎಂಬಾತ ನಾರ್ತ್ ಈಸ್ಟ್ ಅಟ್ಲಾಂಟಾ ಹೆಲ್ತ್ & ರಿಹ್ಯಾಬಿಲಿಟೇಶನ್ ಸೆಂಟರ್ ಗೆ ದಾಖಲಾಗಿದ್ದ.

ಬೆಳಗ್ಗೆ ಸುಮಾರು 5.30ರ ವೇಳೆಗೆ ಜೇಮ್ಸ್ ಸಂಪೂರ್ಣ ಅಸ್ವಸ್ಥನಾಗಿದ್ದಾನೆ. ಸಹಾಯಕ್ಕಾಗಿ ನರ್ಸ್ ಗಳನ್ನು ಕರೆದಿದ್ದಾನೆ. ಆದ್ರೆ ಆತನ ಎದುರೇ ನಗುತ್ತ ನರ್ಸ್ ಗಳು ಕಾಲ ಕಳೆದಿದ್ದಾರೆ.

ಸುಮಾರು ಒಂದು ಗಂಟೆ ಬಳಿಕ 911ಗೆ ಕರೆ ಮಾಡಿದ್ದಾರೆ. ಆದ್ರೆ ಅಷ್ಟರಲ್ಲಿ ಕಾಲ ಮಿಂಚಿಹೋಗಿತ್ತು, ತೀವ್ರ ಬಳಲಿದ್ದ ಜೇಮ್ಸ್ ಕೊನೆಯುಸಿರೆಳೆದಿದ್ದಾನೆ. ಈ ಬಗ್ಗೆ ಆತನ ಕುಟುಂಬದವರು ದೂರು ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...