alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಬೆಚ್ಚಿಬೀಳಿಸುವಂಥ ಫೋಟೋ…!

ಹೆಬ್ಬಾವಿನ ಹೆಸರು ಕೇಳಿದ್ರೆ ಸಾಕು ಎಲ್ರೂ ಭಯಪಡ್ತಾರೆ. ಅದನ್ನು ದೂರದಿಂದ ನೋಡಿದ್ರೆ ಒಂದು ರೀತಿಯ ನಡುಕ, ಅಂಥದ್ರಲ್ಲಿ ಮೈಮೇಲೆ ಹರಿದಾಡಿದ್ರೆ ಹೇಗಿರುತ್ತೆ ಊಹಿಸಿಕೊಳ್ಳಿ. ಈ ಪುಟ್ಟ ಬಾಲಕಿಯ ಫೋಟೋ ನೋಡಿ ಎಲ್ರೂ ಬೆಚ್ಚಿಬಿದ್ದಿದ್ದಾರೆ.

ಆರಾಮಾಗಿ ಸೋಫಾ ಮೇಲೆ ಕುಳಿತು ಈ ಪುಟಾಣಿ ಹಾಲು ಕುಡಿಯುತ್ತಿದ್ದಾಳೆ. ಅವಳ ತೊಡೆ ಮೇಲೆ ಏನಿದೆ ಗೊತ್ತಾ? ದೈತ್ಯ ಗಾತ್ರದ ಹೆಬ್ಬಾವು. ಹಳದಿ ಬಣ್ಣದ ಹೆಬ್ಬಾವು ಮಗುವಿನ ತೊಡೆ ಮೇಲೆ ಮಲಗಿದೆ. ಈ ಹಾವಿನ ಹೆಸರು ಚೆರ್.

ಬ್ರಿಟನ್ ನ ಮನೆಯೊಂದರಲ್ಲಿ ಹೆಬ್ಬಾವನ್ನು ಸಾಕಿದ್ದಾರಂತೆ. ಹಾವನ್ನು ಕೂಡ ಮಗುವಿನಂತೆ ಆರೈಕೆ ಮಾಡ್ತಾರೆ. ಮನೆಯಲ್ಲಿ ಬೇಬಿ ಸಿಟ್ಟರ್, ಮಗು ಮತ್ತು ಹೆಬ್ಬಾವನ್ನು ಬಿಟ್ಟು ಹೋಗಿದ್ದಾರೆ ಹೆತ್ತವರು. ಹಾವಿಗೆ ಸ್ವಲ್ಪವೂ ಹೆದರದೆ ಅದನ್ನು ತೊಡೆ ಮೇಲೆ ಮಲಗಿಸಿಕೊಂಡಿರೋ ಮಗುವನ್ನು ನೋಡಿ ಎಲ್ರೂ ದಂಗಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...