alex Certify
ಕನ್ನಡ ದುನಿಯಾ       Mobile App
       

Kannada Duniya

ಸಮುದ್ರದಾಳದಲ್ಲಿ ಪತ್ತೆಯಾಯ್ತು ದೈತ್ಯ ಜೀವಿ…!

ನ್ಯೂಜಿಲ್ಯಾಂಡ್‌ನ ಉತ್ತರ ಭಾಗದಿಂದ 30 ಮೈಲಿ ದೂರದಲ್ಲಿ ಸಮುದ್ರದಾಳಕ್ಕೆ ಇಳಿದಿದ್ದ ಇಬ್ಬರು ಡೈವರ್‌ ಗಳಿಗೆ ಸಖೇದಾಶ್ಚರ್ಯ ಕಾದಿತ್ತು. 26 ಅಡಿ ಉದ್ದದ ದೈತ್ಯ ಸಮುದ್ರಜೀವಿಯೊಂದು ಅವರಿಗೆ ಎದುರಾಗಿತ್ತು.

ಅದೊಂದು ಅದ್ಭುತ ಅನುಭವ. ಏನಾದರೂ ಭಿನ್ನವಾಗಿದ್ದನ್ನು ನೋಡಬೇಕೆಂಬ ನನ್ನ ಕನಸು ಸಾಕಾರಗೊಂಡ ಕ್ಷಣವದು. ಅದನ್ನು ಮುಟ್ಟಿದರೆ ತುಂಬಾ ಮೃದುವಾಗಿತ್ತು ಎಂದು 47 ವರ್ಷದ ಸ್ಟೀವ್ ಹ್ಯಾಥ್‌ವೇ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಅದನ್ನು ವಿಜ್ಞಾನಿಗಳು ಪೈರೋಸೋಮ್ ಎಂದು ಕರೆಯುತ್ತಾರೆ. ಅದು ಸಮುದ್ರದಲ್ಲಿ ಮುಕ್ತವಾಗಿ ತೇಲುವ ದ್ರವ್ಯರಾಶಿ ಜಾತಿಯ ಸಮುದ್ರ ಜೀವಿಯದು. ಅದು ಸ್ವಯಂ ಬೆಳಗುವ ಗುಣ ಹೊಂದಿರುತ್ತದೆ. ಹಾಗಾಗಿ ಅದನ್ನು ವಿಲಕ್ಷಣ ಏಕಶೃಂಗಿ ಎಂದು ಕರೆಯುತ್ತಾರೆ. ಪೈರೋಸೋಮ್‌ಗಳು 1800ರಲ್ಲಿ ಮೊದಲ ಬಾರಿಗೆ ಕಂಡಬಂದಿದೆ.

ನಾನು 11 ವರ್ಷಗಳಿಂದ ಸಮುದ್ರದಾಳದಲ್ಲಿ ವಿಡಿಯೋ ಮಾಡುತ್ತಿದ್ದೇನೆ. ಬೇರೆ ಬೇರೆ ಜೀವಿಗಳೆಲ್ಲಾ ಎದುರಾಗಿದ್ದಿದೆ. ಆದರೆ ಪೈರೋಸೋಮ್ ಯಾವತ್ತೂ ಕಂಡಿಲ್ಲ ಎನ್ನುತ್ತಾರೆ ಹ್ಯಾಥ್‌ವೇ. ಪೈರೋಸೋಮ್‌ನ ವಿಡಿಯೋವನ್ನು ಹ್ಯಾಥ್‌ವೇ ಹಂಚಿಕೊಂಡಿದ್ದಾರೆ.ನೀವೂ ನೋಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...