alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನದಲ್ಲಿ ಪವರ್ ಬ್ಯಾಂಕ್ ಸ್ಫೋಟ, ಪ್ರಯಾಣಿಕ ಬೆಂಕಿ ಆರಿಸಲು ಬಳಸಿದ್ದೇನು?

ಚೀನಾದ ವಿಮಾನವೊಂದರಲ್ಲಿ ಪವರ್ ಬ್ಯಾಂಕ್ ಸ್ಫೋಟಿಸಿದೆ. ಇದರಿಂದಾಗಿ ವಿಮಾನ ಟೇಕಾಫ್ ಆಗಲು 3 ಗಂಟೆ ವಿಳಂಬವಾಯ್ತು. ವಿಮಾನ ಹೊರಡಲು ಕೆಲವೇ ನಿಮಿಷಗಳಷ್ಟೇ ಬಾಕಿ ಇತ್ತು. ಪ್ರಯಾಣಿಕರೆಲ್ಲ ಫ್ಲೈಟ್ ಏರುತ್ತಿದ್ರು.

ಪ್ರಯಾಣಿಕನ ಲಗೇಜ್ ಬ್ಯಾಗ್ ನಲ್ಲಿದ್ದ ಪವರ್ ಬ್ಯಾಂಕ್ ಇದ್ದಕ್ಕಿದ್ದಂತೆ ಹೊತ್ತಿ ಉರಿದಿದೆ. ವಿಮಾನ ಸಿಬ್ಬಂದಿ ಕೂಡಲೇ ಒಂದು ಬಾಟಲಿ ನೀರನ್ನು ಅದರ ಮೇಲೆ ಹಾಕಿದ್ದಾನೆ. ಇನ್ನೋರ್ವ ಪ್ರಯಾಣಿಕ ಜ್ಯೂಸ್ ಚೆಲ್ಲುವ ಮೂಲಕ ಬೆಂಕಿ ಆರಿಸಿದ್ದಾನೆ.

ಪವರ್ ಬ್ಯಾಂಕ್ ಸ್ಫೋಟಗೊಂಡ ವಿಡಿಯೋ ಕೂಡ ವೈರಲ್ ಆಗಿದೆ. ಗುವಾಂಗ್ಜೌನಿಂದ ಶಾಂಘೈಗೆ ಹೊರಟಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ. ಪ್ರಯಾಣಿಕನ ಬ್ಯಾಗ್ ನಿಂದ ಹೊಗೆ ಹಾಗೂ ಬೆಂಕಿ ಹೊರಸೂಸುತ್ತಿರುವ ದೃಶ್ಯ ಕೂಡ ಕ್ಯಾಮರಾದಲ್ಲಿ ಸೆರೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...