alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಯ್ತು ಪತ್ನಿ ಜೊತೆಗಿನ ನವಾಜ್ ಷರೀಫ್ ಕೊನೆಯ ಭೇಟಿ

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ತಮ್ಮ ಕ್ಯಾನ್ಸರ್ ಪೀಡಿತ ಪತ್ನಿಯ ಜೊತೆಗೆ ಕೊನೆಯ ಬಾರಿಗೆ ಮಾತನಾಡುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.

ಬೇಗಮ್ ಕುಲ್ಸೂಮ್ ಷರೀಫ್ ಅವರು ಮರಣದ ಅಂಚಿನಲ್ಲಿರುವಾಗ ಷರೀಫ್ ತುಂಬಾ ಭಾವುಕರಾಗಿ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಲಂಡನ್ ನ ಆಸ್ಪತ್ರೆಯಲ್ಲಿ ಚಿತ್ರಿತವಾಗಿರುವ ಈ ದೃಶ್ಯ ನೋಡುಗರನ್ನು ಕೂಡ ಭಾವುಕರನ್ನಾಗಿಸುತ್ತದೆ.

ಪತ್ನಿಗೆ ಕಣ್ಣು ತೆರೆದು ನೋಡುವಂತೆ ಷರೀಫ್ ವಿನಂತಿ ಮಾಡಿಕೊಳ್ತಿದ್ದಾರೆ. ಉರ್ದುವಿನಲ್ಲಿ ಮಾತನಾಡುತ್ತಾ ಷರೀಫ್, ಪತ್ನಿಗೆ ದೇವರು ಶಾಂತಿಯನ್ನು ನೀಡಲಿ ಅಂತ ಹೇಳುತ್ತಿದ್ದಾರೆ. ತುಂಬಾ ಹೊತ್ತಿನ ನಂತರದಲ್ಲಿ ಷರೀಫ್ ಪತ್ನಿ ಕಣ್ಣು ತೆಗೆದು ನೋಡಿದ್ದಾರೆ.

ಜುಲೈನಲ್ಲಷ್ಟೇ ಷರೀಫ್ 12 ವರ್ಷಗಳ ಸೆರೆಮನೆ ವಾಸಕ್ಕೆ ಗುರಿಯಾಗಿದ್ದಾರೆ. ಲಂಡನ್ನಿಂದ ನಿರ್ಗಮಿಸುವ ಮುನ್ನ ಷರೀಫ್ ತಮ್ಮ ಪತ್ನಿಯನ್ನು ಕೊನೆಯ ಬಾರಿ ಭೇಟಿಯಾಗಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಷರೀಫ್ ಪತ್ನಿ ನಿನ್ನೆಯಷ್ಟೇ ಸಾವಿಗೀಡಾಗಿದ್ದಾರೆ. ನವಾಜ್ ಷರೀಫ್ ಸೇರಿದಂತೆ ಅವರ ಅಳಿಯಂದಿರು ಭ್ರಷ್ಟಾಚಾರದ ಆರೋಪದಲ್ಲಿ ರಾವಲ್ಪಿಂಡಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...