alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದೊಳ್ಳೆ ಕಾರಣಕ್ಕಾಗಿ ವೈರಲ್ ಆಗಿದೆ ಈ ವಿಡಿಯೋ

ಏರ್ಪೋರ್ಟ್ ನ ಬ್ಯಾಗೇಜ್ ಕೌಂಟರ್ ನಲ್ಲಿ ಲಗೇಜ್ ಗಳು ಸುರಕ್ಷಿತವಾಗಿರ್ತವೆ ಅನ್ನೋ ಗ್ಯಾರಂಟಿ ಅನೇಕರಿಗೆ ಇರೋದೇ ಇಲ್ಲ. ಕೆಲವೊಮ್ಮೆ ಪ್ರಯಾಣಿಕರ ಬ್ಯಾಗ್ ಚೆಕ್ ಮಾಡುವ , ಅದನ್ನು ಕಸದಂತೆ ಎಸೆಯುವ ವಿಡಿಯೋಗಳು ಕೂಡ ಹರಿದಾಡೋದನ್ನು ನೋಡಿದ್ದೇವೆ.

ಆದ್ರೆ ದಕ್ಷಿಣ ಆಫ್ರಿಕಾದ ಲಾನ್ಸೇರಿಯಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಪ್ರಯಾಣಿಕರ ಲಗೇಜ್ ಜೋಪಾನ ಮಾಡುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

ಎಪ್ರಹಿಂ ಸಿಬೇಕೋ ಎಂಬಾತ ಪ್ರಯಾಣಿಕರ ಲಗೇಜ್ ಗಳನ್ನ ತುಂಬಾನೇ ಜೋಪಾನ ಮಾಡ್ತಿದ್ದಾನೆ. ಬ್ಯಾಗ್ ಗಳನ್ನ ಒಂದು ಆರ್ಡರ್ನಲ್ಲಿ ಜೋಡಿಸುತ್ತಾ ವಿಶ್ವದ ಗಮನ ಸೆಳೆದಿದ್ದಾನೆ. ಪ್ರತಿಯೊಂದು ಬ್ಯಾಗ್ ಗಳನ್ನ ಅವುಗಳ ಹೆಸರಿನ ಬ್ಯಾಡ್ಜ್ ಕಾಣುವ ಹಾಗೆ ಎಪ್ರಹಿಂ ಅರೇಂಜ್ ಮಾಡುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಸೆಪ್ಟೆಂಬರ್ 6 ರಂದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಆಗಿರುವ ವಿಡಿಯೋ ಈಗ 40,000 ಪ್ರತಿಕ್ರಿಯೆಗಳನ್ನ ಪಡೆದಿದೆ. 23,000 ಷೇರ್ಸ್, ಸಾವಿರಾರು ಕಾಮೆಂಟ್ ಗಳನ್ನ ಈ ವಿಡಿಯೋ ಪಡೆದಿದೆ.

Posted by Janine Brand on Wednesday, September 5, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...