alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನದಲ್ಲಿ ಭಿಕ್ಷೆ ಬೇಡುತ್ತಿದ್ದುದ್ದನ್ನು ಕಂಡ ಪ್ರಯಾಣಿಕರು ಕಕ್ಕಾಬಿಕ್ಕಿ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಎಲ್ಲರನ್ನು ಅಚ್ಚರಿಗೀಡು ಮಾಡಿದೆ. ಇದುವರೆಗೂ ಬಸ್, ರೈಲುಗಳಲ್ಲಿ ಮಾತ್ರ ಭಿಕ್ಷುಕರನ್ನು ನೋಡಿದ್ದವರಿಗೆ ಈಗ ವಿಮಾನದಲ್ಲೂ ಭಿಕ್ಷೆ ಬೇಡಿರುವುದು ನಿಬ್ಬೆರಗಾಗಿಸಿದೆ.

ಇಂಥದೊಂದು ಘಟನೆ ಪಾಕಿಸ್ತಾನದ ಕರಾಚಿಯಿಂದ ಬ್ಯಾಂಕಾಕ್ ಗೆ ತೆರಳುತ್ತಿದ್ದ ವಿಮಾನದಲ್ಲಿ ನಡೆದಿದ್ದು, ಭಿಕ್ಷುಕ ಭಿಕ್ಷೆ ಬೇಡಲು ಆರಂಭಿಸಿದ್ದನ್ನು ನೋಡುತ್ತಿದ್ದಂತೆ ವಿಮಾನದ ಸಿಬ್ಬಂದಿ ಕಕ್ಕಾಬಿಕ್ಕಿಯಾಗಿದ್ದಾರೆ.

ಆತನ ಬಳಿ ತೆರಳಿದ ವಿಮಾನ ಸಿಬ್ಬಂದಿ, ವಿವರ ಕೇಳಲು ಯತ್ನಿಸಿದರೂ ತಲೆಕೆಡಿಸಿಕೊಳ್ಳದ ಆತ, ತನ್ನ ಕಾರ್ಯ ಮುಂದುವರಿಸಿದ್ದಾನೆ. ಈ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದವರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದು, ಅದೀಗ ವೈರಲ್ ಆಗಿದೆ.

ಕೆಲವರು ಆತನನ್ನು ಪಾಕಿಸ್ತಾನಿ ಪ್ರಜೆ ಎನ್ನುತ್ತಿದ್ದರೆ ಮತ್ತೆ ಹಲವರು ಇರಾನಿ ಪ್ರಜೆ ಎಂದು ಹೇಳುತ್ತಿದ್ದಾರೆ. ಆದರೆ ಪಾಕ್ ವಿಮಾನಯಾನ ಸಂಸ್ಥೆ ಮಾತ್ರ ಈ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಈ ಮಧ್ಯೆ ಕೆಲವರು ಈ ವಿಮಾನ ದೋಹಾದಿಂದ ಶಿರಾಜ್ ಗೆ ತೆರಳುತ್ತಿತ್ತೆಂದು ಹೇಳಿದ್ದು, ಸ್ಪಷ್ಟನೆ ಬಳಿಕವಷ್ಟೇ ಸತ್ಯಾಂಶ ಹೊರ ಬರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...