alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಾಹಕಿ ಬಟ್ಟೆ ಅಸ್ತವ್ಯಸ್ತವಾದ್ರೂ ಹೊಡೆಯೋದನ್ನು ಬಿಡಲಿಲ್ಲ ಸೂಪರ್ವೈಸರ್

ಇತ್ತೀಚಿನ ದಿನಗಳಲ್ಲಿ ಜನರು ತಾಳ್ಮೆ ಕಳೆದುಕೊಳ್ತಿದ್ದಾರೆ. ಸಣ್ಣ-ಸಣ್ಣ ವಿಚಾರಕ್ಕೆ ಕೋಪಗೊಳ್ತಿದ್ದಾರೆ. ಇದಕ್ಕೆ ಲಾಸ್ ವೆಗಾಸ್ ನಲ್ಲಿ ನಡೆದ ಘಟನೆ ಇನ್ನೊಂದು ಉದಾಹರಣೆ. ಲಾಸ್ ವೆಗಾಸ್ ಮೆಕ್ ಡೋನಾಲ್ಡ್ ನಲ್ಲಿ ನಡೆದ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಉಚಿತವಾಗಿ ಸೋಡಾ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ಶುರುವಾಗಿದೆ. ಗ್ರಾಹಕಿ ಹಾಗೂ ಮಹಿಳಾ ಸೂಪರ್ವೈಸರ್ ನಡುವೆ ಶುರುವಾದ ಗಲಾಟೆ ಕೈ ಕೈ ಮಿಲಾಯಿಸುವ ಹಂತ ತಲುಪಿದೆ. ಗ್ರಾಹಕಿ ಸೋಡಾ ಕೇಳಿದ್ದಾಳೆ. ಸೋಡಾ ಮಶಿನ್ ಬಂದ್ ಮಾಡಿದ ಸೂಪರ್ವೈಸರ್ ಸೋಡಾ ಇಲ್ಲ ಎಂದಿದ್ದಾಳೆ. ಇದ್ರಿಂದ ಕೋಪಗೊಂಡ ಗ್ರಾಹಕಿ ಸೂಪರ್ವೈಸರ್ ಮುಖಕ್ಕೆ ಮಿಲ್ಕ್ ಶೇಕ್ ಎರಚುತ್ತಾಳೆ. ಜೊತೆಗೆ ತಾಯಿ ಬಗ್ಗೆ ಕೆಟ್ಟದಾಗಿ ಮಾತನಾಡ್ತಾಳೆ.

ಇದ್ರಿಂದ ಕೋಪಗೊಂಡ ಸೂಪರ್ವೈಸರ್, ಗ್ರಾಹಕಿಗೆ ಮನಸ್ಸಿಗೆ ಬಂದಂತೆ ಥಳಿಸಿದ್ದಾಳೆ. ಗ್ರಾಹಕಿ ಬಟ್ಟೆ ಅಸ್ತವ್ಯವಸ್ತವಾದ್ರೂ ಸೂಪರ್ವೈಸರ್ ಹೊಡೆಯೋದನ್ನು ಬಿಡೋದಿಲ್ಲ. ಆಸುಪಾಸಿದ್ದ ಜನರು ಗಲಾಟೆ ಬಿಡಿಸುವ ಯತ್ನ ಮಾಡಿದ್ದಾರೆ. ಆದ್ರೆ ಗ್ರಾಹಕಿಗೆ ಸರಿಯಾಗಿ ಒದೆ ಬಿದ್ದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...