alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ಸಾಂಗ್ ಗೆ ಪರ್ವೇಜ್ ಮುಷರಫ್ ಡಾನ್ಸ್

pp-25

ಪಾಕಿಸ್ತಾನದ ಮಾಜಿ ಅಧ್ಯಕ್ಷ ಹಾಗೂ ಮಾಜಿ ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ ಸದ್ಯ ಪಾಕಿಸ್ತಾನದಲ್ಲಿಲ್ಲ. ಮುಷರಫ್ ಲಂಡನ್ ನಲ್ಲಿ ವಾಸವಾಗಿದ್ದಾರೆ ಎನ್ನಲಾಗ್ತಾ ಇದೆ. ವಿಷ್ಯ ಅದಲ್ಲ, ಮುಷರಫ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿದೆ. ನೈಟ್ ಕ್ಲಬ್ ನಲ್ಲಿ ಬಾಲಿವುಡ್ ಹಾಡಿಗೆ ಮುಷರಫ್ ಡಾನ್ಸ್ ಮಾಡಿದ್ದಾರೆ.

ದಿಲ್ಲಿವಾಲಿ ಗರ್ಲ್ಫ್ರೆಂಡ್ ಹಾಡಿಗೆ ಮುಷರಫ್ ಹೆಜ್ಜೆ ಹಾಕಿರುವ ವಿಡಿಯೋ ಇದಾಗಿದೆ. ವಿಡಿಯೋ ಯಾವಾಗ ಮಾಡಲಾಯ್ತು ಮತ್ತು ಯಾರು ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ.ಆದ್ರೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಾ ಇದೆ. ಪಾಕಿಸ್ತಾನಿ ಪತ್ರಕರ್ತ ಹಮೀದ್ ಮೀರ್ ಟ್ವೀಟರ್ ನಲ್ಲಿ ಈ ವಿಡಿಯೋ ಹಾಕಿದ್ದಾರೆ. ಜೊತೆಗೆ ಟ್ವೀಟ್ ಕೂಡ ಮಾಡಿದ್ದಾರೆ.

ಮುಷರಫ್ ಗೆ ಬೆನ್ನು ನೋವಿದೆ ಎನ್ನುವ ಸುದ್ದಿ ಇದೆ. ಆದ್ರೆ ಸಂತೋಷದಿಂದ ಡಾನ್ಸ್ ಮಾಡ್ತಿದ್ದಾರೆ. ಬೆನ್ನು ನೋವಿರೋದು ಹೌದಾ ಎಂದು ಕೇಳಿದ್ದಾರೆ ಹಮೀದ್.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...