alex Certify
ಕನ್ನಡ ದುನಿಯಾ       Mobile App
       

Kannada Duniya

ಅಪಘಾತದ ತೀವ್ರತೆಗೆ ಕಾರಿನಿಂದ ಎಗರಿ ಬಿದ್ದ ಬಾಲಕ, ಆದ್ರೂ ಬಚಾವಾಗಿದ್ಹೇಗೆ…?

ಕಾರು ಚಾಲಕನ ಸಮಯ ಪ್ರಜ್ಞೆಯಿಂದಾಗಿ ಭೀಕರ ಅಪಘಾತವೊಂದರಲ್ಲಿ ಬಾಲಕ ಪಾರಾಗಿದ್ದಾನೆ. ಚೀನಾದ ಜಿಯಾಂಗ್ಸು ಎಂಬಲ್ಲಿ ನಡೆದ ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮಿನಿ ವ್ಯಾನ್ ಹಾಗೂ ಕಾರ್ ಮಧ್ಯೆ ಡಿಕ್ಕಿ ಸಂಭವಿಸಿತ್ತು. ಕಾರಿನಲ್ಲಿದ್ದ 7 ವರ್ಷದ ಬಾಲಕ ಅಪಘಾತದ ರಭಸಕ್ಕೆ ದೂರ ಹಾರಿ ಬಿದ್ದಿದ್ದಾನೆ. ಇದನ್ನು ಗಮನಿಸಿದ ವ್ಯಕ್ತಿಯೊಬ್ಬ ಕೂಡಲೇ ಸ್ಥಳಕ್ಕೆ ಧಾವಿಸಿ ಬಂದು ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರೆತಿದ್ದರಿಂದ ಬಾಲಕ ಬದುಕುಳಿದಿದ್ದಾನೆ.

ಅತಿ ಶೀಘ್ರವಾಗಿ ಬಾಲಕನನ್ನು ಆಸ್ಪತ್ರೆಗೆ ತಲುಪಿಸಲು ರಸ್ತೆಯ ಎಲ್ಲಾ ಸಿಗ್ನಲ್ ಗಳಲ್ಲೂ ಕೆಂಪು ದೀಪವನ್ನು ಬೆಳಗಿಸಲಾಗಿತ್ತು. ಹಾಗಾಗಿ ಯಾವುದೇ ಸಿಗ್ನಲ್ ಹಾಗೂ ಟ್ರಾಫಿಕ್ ಸಮಸ್ಯೆ ಇಲ್ಲದೆ ಆಸ್ಪತ್ರೆಗೆ ಬಾಲಕನನ್ನು ರವಾನೆ ಮಾಡಲು ಸಾಧ್ಯವಾಯ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...